Trending

ಅಂಬಾನಿ ಮಗನ ಮದುವೆಗೆ ಬಂದವರಿಗೆ 2 ಕೋಟಿ ಮೌಲ್ಯದ ವಾಚ್‌ ಗಿಫ್ಟ್

Spread the love

ಮುಂಬಯಿ: ಉದ್ಯಮಿ ಅಂಬಾನಿ ಮಗನ ವಿವಾಹ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಜು.12 ರಂದು ಅನಂತ್ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸ್ವರ್ಗವನ್ನೇ ಧರೆಗಿಳಿಸಿದಂತೆ ಕೋಟಿ ಕೋಟಿ ಖರ್ಚು ಮಾಡಿ ಮದುವೆಯನ್ನು ನೆರವೇರಿಸಿದ್ದಾರೆ. ವರದಿಗಳ ಪ್ರಕಾರ 5000 ಕೋಟಿ ರೂ. ಮದುವೆಗಾಗಿ ಖರ್ಚು ಮಾಡಲಾಗಿದೆ ಎನ್ನಲಾಗಿದೆ.

ದೇಶ – ವಿದೇಶದ ಗಣ್ಯರು, ಸೆಲೆಬ್ರಿಟಿಗಳು ಮದುವೆಗೆ ಆಗಮಿಸಿ ನವದಂಪತಿಗೆ ಶುಭ ಹಾರೈಸಿದ್ದಾರೆ. ಬಿಟೌನ್‌ ತಾರೆಯರು ಕುಣಿದು ಕುಪ್ಪಳಿಸಿದ್ದಾರೆ.

ಸಾಮಾನ್ಯವಾಗಿ ಮದುವೆಗೆ ಉಡುಗೊರೆ ಕೊಡುವುದನ್ನು ನೋಡಿದ್ದೇವೆ. ಆದರೆ ಅಂಬಾನಿ ಮನೆಯ ಮದುವೆಯಲ್ಲಿ ಬಂದ ಸೆಲೆಬ್ರಿಟಿಗಳಿಗೆ 2 ಕೋಟಿ ರೂ. ಮೌಲ್ಯದ ವಾಚ್‌ ನೀಡಲಾಗಿದೆ.

ಶಾರುಖ್‌ ಖಾನ್‌, ರಣವೀರ್‌ ಸಿಂಗ್‌ ಸೇರಿದಂತೆ ಹಲವರಿಗೆ ಅಂಬಾನಿ ಮನೆಯಿಂದ ಲಿಮಿಟೆಡ್‌ ಆವೃತ್ತಿಯ ಆಡೆಮರ್ಸ್ ಪಿಗುಯೆಟ್ ಕಂಪೆನಿಯ ವಾಚ್‌ ಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ವಾಚ್‌ ನ ಬೆಲೆ 2 ಕೋಟಿ ರೂ. ಆಗಿದ್ದು, 9.5 ಮಿಮೀ ದಪ್ಪವಿರುವ ವಾಚ್‌ ಇದಾಗಿದೆ. 41 ಎಂಎಂ 18 ಕ್ಯಾರಟ್‌ನ ಚಿನ್ನದ ವಾಚ್‌ಗಳಾಗಿವೆ. ವಾಚ್‌ ವಾರ, ದಿನ, ದಿನಾಂಕ ಇನ್ನೀತರ ಮಾಹಿತಿಯನ್ನು ನೀಡುತ್ತದೆ.

“ಎಲ್ಲಾ ಸ್ನೇಹಿತರಿಗೆ ಅನಂತ್ ಅಂಬಾನಿ ವಿಶೇಷ ಮದುವೆ ಉಡುಗೊರೆ ನೀಡಿದ್ದಾರೆ” ಎನ್ನುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಬಿಟೌನ್‌ ನಿಂದ ಸಲ್ಮಾನ್‌ ಖಾನ್ ಶಾರುಖ್ ಖಾನ್, ಸಲ್ಮಾನ್‌ ಖಾನ್, ಅಮಿತಾಭ್‌ ಬಚ್ಚನ್‌, ಅಭಿಷೇಕ್‌ ಬಚ್ಚನ್‌, ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಜೋನಾಸ್, ಅನನ್ಯಾ ಕಪೂರ್, ರಣವೀರ್ ಸಿಂಗ್, ಶನಯಾ ಕಪೂರ್, ಶಿಖರ್ ಪಹಾರಿಯಾ ಸೇರಿದಂತೆ ಅನೇಕರು ಮದುವೆಯಲ್ಲಿ ಭಾಗಿಯಾಗಿದ್ದರು.

[pj-news-ticker]