Breaking
Tue. Jul 16th, 2024

ಬಿಸಿ ಬಿಸಿ ಸಾಂಬಾರ್‌ನಲ್ಲಿ ಸಿಕ್ತು ಸತ್ತ ಇಲಿ! ಹೊಟೇಲ್‌ ಫುಡ್‌ ತಿನ್ನೋ ಮುನ್ನ ಈ ವಿಡಿಯೋ ನೋಡಿ

By Mooka Nayaka News Jun 21, 2024
Spread the love

ಅಹಮಾದಾಬಾದ್‌: ಕೆಲವು ದಿನಗಳ ಹಿಂದೆ ರೈಲಿನಲ್ಲಿ ನೀಡುವ ಊಟದಲ್ಲಿ ಜೀವಂತ ಜಿರಳೆ ಪತ್ತೆಯಾದ ಘಟನೆ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಘಟನೆ ಗುಜರಾತ್‌ನಲ್ಲಿ ವರದಿಯಾಗಿದೆ.ಸದಾ ಹೊಟೇಲ್‌ ಆಹಾರ ಇಷ್ಟ ಪಡುವವರೂ ಈ ಸುದ್ದಿ ನೋಡಿ ಶಾಕ್‌ ಆಗೋದು ಗ್ಯಾರಂಟಿ.

ರೆಸ್ಟೋರೆಂಟ್‌ವೊಂದರ ಸಾಂಬಾರಿನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿದೆ. ಈ ಆಘಾತಕಾರಿ ವಿಡಿಯೋ ನೋಡಿದ ನೆಟ್ಟಿಗರು ಹೌಹಾರಿದ್ದಾರೆ.

ವಿಡಿಯೋದಲ್ಲೇನಿದೆ?

ಅಹಮದಾಬಾದ್‌ನ ನಿಕೋಲ್‌ ಪ್ರದೇಶದಲ್ಲಿರುವ ದೇವಿ ದೋಸಾ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಗ್ರಾಹಕರೊಬ್ಬರು ಫುಡ್‌ ಆರ್ಡರ್‌ ಮಾಡಿದ್ದರು. ಟೇಬಲ್‌ಗೆ ಫುಡ್‌ ಬರುತ್ತಿದ್ದಂತೆ ಬಹಳ ಖುಷಿಯಿಂದ ತೆರೆದು ನೋಡಿದರೆ ಸಾಂಬಾರ್‌ನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದೆ. ಇದನ್ನು ಕಂಡು ಶಾಕ್‌ ಆದ ಗ್ರಾಹಕರು ತಕ್ಷಣ ಗಲಾಟೆ ಮಾಡಿದ್ದಾರೆ. ಆದರೆ ಹೊಟೇಲ್‌ ಸಿಬ್ಬಂದಿ ಇದಕ್ಕೆ ಕ್ಯಾರೇ ಎನ್ನದಾಗ ಗ್ರಾಹಕ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಅಹ್ಮದಾಬಾದ್‌ ಮಹಾನಗರ ಪಾಲಿಕೆ(AMC) ಇದನ್ನು ಗಂಭೀರವಾಗಿ ಪರಿಗಣಿಸಿದೆ. ಅದೂ ಅಲ್ಲದೇ ಈ ವಿಚಾರ ರಾಜ್ಯ ಆರೋಗ್ಯ ಇಲಾಖೆ ರೆಸ್ಟೋರೆಂಟ್‌ ಮಾಲಿಕ ಅಲ್ಪೇಶ್‌ ಕೆವಾಡಿಯಾ ಅವರಿಗೆ ನೊಟೀಸ್‌ ಜಾರಿಗೊಳಿಸಿದೆ. ಅದೂ ಅಲ್ಲದೇ ಅಧಿಕಾರಿಗಳು ರೆಸ್ಟೋರೆಂಟ್‌ಗೆ ಬೀಗ ಜಡಿದಿದ್ದಾರೆ. ಇನ್ನು ವಿಡಿಯೋ ನೋಡಿದ ಅನೇಕ ನೆಟ್ಟಿಗರು ವಿವಿಧ ರೀತಿಯಲ್ಲಿ ರಿಯಾಕ್ಟ್‌ ಮಾಡಿದ್ದಾರೆ.

 

Related Post