Breaking
Tue. Jul 16th, 2024

7ನೇ ವೇತನ ಆಯೋಗ ಜಾರಿ ಸದ್ಯಕ್ಕಿಲ್ಲ

By Mooka Nayaka News Jun 21, 2024
Spread the love

ಬೆಂಗಳೂರು: ಏಳನೇ ವೇತನ ಆಯೋಗದ ಜಾರಿ ಕುರಿತು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ನಿರ್ಧಾರ ಪ್ರಕಟವಾಗಿಲ್ಲವಾದರೂ ಈ ವಿಚಾರ ಪ್ರಾಸಂಗಿಕವಾಗಿ ಸುಳಿದು ಹೋಗಿದ್ದು, ಸರಕಾರಿ ನೌಕರರಿಗೆ ಮತ್ತೆ ನಿರಾಸೆಯಾಗಿದೆ.

ಗುರುವಾರದ ಸಂಪುಟ ಸಭೆಯ ಕಾರ್ಯಸೂಚಿ ಪಟ್ಟಿಯಲ್ಲಿ ಈ ವಿಚಾರವೇ ನಮೂದಾಗಿರಲಿಲ್ಲ. ಆದರೆ ಸಭೆ ಮುಕ್ತಾಯದ ಬಳಿಕ ಪ್ರಾಸಂಗಿಕವಾಗಿ ಹಾದು ಹೋಗಿದೆ. ಸರಕಾರದ ಉನ್ನತ ಮೂಲಗಳ ಪ್ರಕಾರ ಸಂಪುಟದ ಬಹುತೇಕ ಸಚಿವರು ಸದ್ಯದ ಪರಿಸ್ಥಿತಿಯಲ್ಲಿ ಏಳನೇ ವೇತನ ಆಯೋಗದ ಪ್ರಸ್ತಾವನೆ ಜಾರಿ ಬೇಡ ಎಂಬ ನಿಲುವು ಹೊಂದಿದ್ದಾರೆ.

ಗ್ಯಾರಂಟಿ ಭಾರದಲ್ಲಿ ನಲುಗುತ್ತಿರುವ ಸರಕಾರಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಇಷ್ಟೊಂದು ವೆಚ್ಚ ಭರಿಸುವ ಸಾಮರ್ಥ್ಯವೂ ಇಲ್ಲ. ಬಜೆಟ್‌ನಲ್ಲಿ ಗುರಿ ನೀಡಿದಷ್ಟು ರಾಜಸ್ವ ಸಂಗ್ರಹ ಮಾಡುವುದಕ್ಕೆ ಸಮಸ್ಯೆ ಯಾಗುತ್ತಿದೆ. ಹೀಗಾಗಿ ಸರಕಾರ 7ನೇ ವೇತನ ಆಯೋಗ ಜಾರಿ ವಿಚಾರದಲ್ಲಿ ಪ್ರಜ್ಞಾಪೂರ್ವಕ ಮೌನವನ್ನು ತಾಳಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಸರಕಾರಿ ನೌಕರರು ಕಾಂಗ್ರೆಸ್‌ ಪರ ನಿಂತಿಲ್ಲ ಎಂಬ ಭಾವನೆಯೂ ಸರಕಾರಕ್ಕಿದೆ ಎಂದು ಹೇಳಲಾಗುತ್ತಿದೆ.

Related Post