Breaking
Tue. Jul 16th, 2024

ಭೀಮಾ ತೀರದಲ್ಲಿ‌ ಹಾಡಹಗಲೇ ಗುಂಡಿನ ದಾಳಿ: ಪರೋಲ್ ಮೇಲೆ ಊರಿಗೆ ಬಂದಿದ್ದ ರೌಡಿಶೀಟರ್ ಬಲಿ

By Mooka Nayaka News Jun 16, 2024
Spread the love

ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಸಿದೆ. ಚಡಚಣ ಪಟ್ಟಣಧ ನೀವರಗಿ ರಸ್ತೆ ಬಳಿ ಹಾಡ-ಹಗಲೇ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ರೌಡಿಶೀಟರ್ ಒಬ್ಬ ಮೃತಪಟ್ಟಿದ್ದಾನೆ.

ಅಶೋಕ ಮಲ್ಲಪ್ಪ ಗಂಟಗಲ್ಲಿ ಮೃತಪಟ್ಟ ರೌಡಿಶೀಟರ್. ಪೆರೋಲ್ ರಜೆ ಮೇಲೆ ಊರಿಗೆ ಬಂದಿದ್ದ ಈತ, ಮನೆಯಿಂದ ಚಡಚಣ ಪಟ್ಟಣಧ ಕಡೆಗೆ ಹೊರಟಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ದಾಳಿ ವೇಳೆ ಅಶೋಕ‌ನ ಬೆನ್ನಿಗೆ ಮೂರಕ್ಕೂ ಅಧಿಕ ಗುಂಡುಗಳು ತಾಗಿದ್ದರಿಂದ ಆತ ಸ್ಥಳದಲ್ಲೇ ಅಸುನೀಗಿದ್ದಾನೆ. ಈತನ ಮನೆ ಪಕ್ಕದಲ್ಲೇ ದಾಳಿ ನಡೆದಿದೆ.

ಮೃತಪಟ್ಟ ಅಶೋಕ ಕೊಲೆ ಹಾಗೂ ಇತರೆ ಕೇಸ್ ಗಳಲ್ಲಿ ಆರೋಪಿಯಾಗಿದ್ದಾನೆ. ಅಶೋಕ ಮೇಲಿನ ಹಳೆ ದ್ವೇಷದಿಂದ ಕೊಲೆ ಮಾಡಿರುವ ಅನುಮಾನವಿದೆ ಎಂದು ಆತನ ಪತ್ನಿ ಪಟ್ಟಣ ಪಂಚಾಯ್ತಿ ವಾರ್ಡ್ ನಂ. 2 ಸದಸ್ಯೆ ದೂರಿದ್ದಾರೆ. ಸ್ಥಳಕ್ಕೆ ಚಡಚಣ ಪೊಲೀಸರ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Post