ಛತ್ತೀಸ್‌ಗಡ: ಜಗತ್ತಿನಲ್ಲಿ ಯಾವ ಯಾವ ಜನರು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ, ಅದರಂತೆ ಛತ್ತೀಸ್‌ಗಡದಲ್ಲೊಬ್ಬ ವ್ಯಕ್ತಿ ತನ್ನ ನೆಚ್ಚಿನ ಪಕ್ಷವಾದ ಬಿಜೆಪಿ ಅಧಿಕಾರಕ್ಕೆ ಬಂದ ಖುಷಿಯಲ್ಲಿ ತನ್ನ ಒಂದು ಬೆರಳನ್ನು ಕಾಳಿ ದೇವಿಗೆ ಅರ್ಪಿಸಿದ್ದಾನೆ.
ಛತ್ತೀಸ್‌ಗಢದ ಬಲರಾಮ್‌ಪುರದ ದುರ್ಗೇಶ್ ಪಾಂಡೆ ಎಂಬಾತನೇ ಬೆರಳನ್ನು ಕತ್ತರಿಸಿಕೊಂಡ ಬಿಜೆಪಿ ಬೆಂಬಲಿಗ, ಮೊನ್ನೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಗಳಿಸಬೇಕೆಂದು ಅಂದುಕೊಂಡಿದ್ದ ಆದರೆ ಕೊನೆ ಗಳಿಗೆಯಲ್ಲಿ ಸಂಖ್ಯಾ ಬಲ ಕಡಿಮೆಯಾಗಿಟ್ಟಿರುವುದನ್ನು ಕಂಡ ಬೆಂಬಲಿಗ ಕಾಳಿ ದೇವಿ ಬಳಿ ಪ್ರಾರ್ಥನೆ ಸಲ್ಲಿಸಿದ್ದಾನೆ ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ತನ್ನ ಒಂದು ಬೆರಳನ್ನು ದೇವಿಗೆ ಅರ್ಪಿಸುವುದಾಗಿ ಹೇಳಿಕೊಂಡಿದ್ದಾನೆ. ಅದರಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಪಡೆದುಕೊಂಡಿತು ಇದರಿಂದ ಸಂತಸಗೊಂಡ ಬೆಂಬಲಿಗ ತನ್ನ ಪ್ರಾರ್ಥನೆಯಂತೆ ಕಾಳಿ ದೇವಿಗೆ ಬೆರಳನ್ನು ಅರ್ಪಿಸಿದ್ದಾನೆ.
ಇತ್ತ ಬೆರಳನ್ನು ಕೊಯ್ದ ಜಾಗದಲ್ಲಿ ರಕ್ತ ಸುರಿಯುತ್ತಿದ್ದುರಿಂದ ಅಸ್ವಸ್ಥಗೊಂಡ ದುರ್ಗೇಶ್ ನನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ, ಸದ್ಯ ಅಪಾಯದಿಂದ ಪಾರಾದ ದುರ್ಗೇಶ್ ಚುನಾವಣಾ ಫಲಿತಾಂಶದ ವೇಳೆ ಬಿಜೆಪಿ ಸಂಖ್ಯಾಬಲ ಕಡಿಮೆಯಾಗುತ್ತಿರುವುದನ್ನು ಕಂಡು ಕಾಳಿ ದೇವಿಯನ್ನು ನೆನೆದು ಬಿಜೆಪಿ ಅಧಿಕಾರಕ್ಕೆ ಬಂದರೆ ನನ್ನ ಒಂದು ಬೆರಳನ್ನು ಅರ್ಪಿಸುವುದಾಗಿ ಪ್ರಾರ್ಥಿಸಿದೆ ಹಾಗಾಗಿ ಕೊನೆ ಕ್ಷಣದಲ್ಲಿ ಬಿಜೆಪಿ ಬಹುಮತ ಪಡುಯುತ್ತಿದ್ದಂತೆ ದೇವಸ್ಥಾನಕ್ಕೆ ಬಂದು ಬೆರಳನ್ನು ಅರ್ಪಿಸಿದೆ ಎಂದು ಹೇಳಿಕೊಂಡಿದ್ದಾನೆ.