Trending

ಶಿವಮೊಗ್ಗದಲ್ಲಿ ಮತ್ತೆ ಪುಂಡರ ಅಟ್ಟಹಾಸ… ಕಾರು, ಬೈಕು, ರಿಕ್ಷಾಗಳ ಗಾಜು ಪುಡಿ ಪುಡಿ

Spread the love

ಶಿವಮೊಗ್ಗ: ಮಲೆನಾಡು ಶಿವಮೊಗ್ಗದಲ್ಲಿ ಮತ್ತೆ ಪುಂಡರು ಅಟ್ಟಹಾಸ ಮೆರೆದಿದ್ದು, ಮನೆಯಮುಂದೆ ನಿಲ್ಲಿಸಿದ್ದ ವಾಹನಗಳ ಗಾಜುಗಳನ್ನು ದುಷ್ಕರ್ಮಿಗಳು ಗಾಂಜಾ ಮತ್ತಿನಲ್ಲಿ ಪುಡಿಗೈದಿದ್ದಾರೆ.

ದೊಡ್ಡಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಮನೆಯ ಮುಂದೆ ನಿಲ್ಲಿಸಿದ್ದ ನಾಲ್ಕು ಕಾರು, ನಾಲ್ಕು ದ್ವಿಚಕ್ರ ವಾಹನ ಹಾಗೂ ಎರಡು ಆಟೋಗಳ ಗಾಜುಗಳನ್ನು ರಾತ್ರೋ ರಾತ್ರಿ‌ ಪುಂಡರ ತಂಡ ಹಾನಿ ಮಾಡಿದೆ.

ಅಷ್ಟು ಮಾತ್ರವಲ್ಲದೆ ಜಗದೀಶ್ ಅವರಿಗೆ ಸೇರಿದ ಅಂಗಡಿ ಬೀಗ ಮಚ್ಚಿನಿಂದ ಹಾನಿಗೊಳಿಸಲಾಗಿದೆ. ಸಂದೇಶ್ ಅವರಿಗೆ ಸೇರಿದ ಹುಂಡೈ ಸ್ಯಾಂಟ್ರೋ ಕಾರು ಜಖಂಗೊಂಡಿದೆ.

ಮಂಜು, ಲಿಂಗರಾಜು ಅವರಿಗೆ ಸೇರಿದ ಎರಡು ಆಟೋಗಳೂ ಕೂಡ ಜಖಂಗೊಂಡಿದೆ. ಅಲ್ಲದೆ ಸಿದ್ದಪ್ಪ, ಜಗದೀಶ್, ಚಂದ್ರಪ್ಪ ಸೇರಿದಂತೆ ನಾಲ್ವರ ಬೈಕ್ ಜಖಂಗೊಂಡಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪುಂಡರ ಪತ್ತೆಗೆ ಬಲೆ ಬಿಸಿದ್ದಾರೆ.

[pj-news-ticker]