ಬೆಂಗಳೂರು: ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಶಿರಹಟ್ಟಿ ಫಕ್ಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮಿಗಳು 9.74 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ.
ಧಾರವಾಡ ಲೋಕಸಭೆ ಕ್ಷೇತ್ರದಿಂದ ಪಕ್ಷೇತ್ತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸುವ ವೇಳೆ ಅಫಿಡವಿಟ್‌ನಲ್ಲಿ ವೀರಶೈವ ಲಿಂಗಾಯತ ಸ್ವಾಮೀಜಿ ಅವರು 1.22 ಕೋಟಿ ಮೌಲ್ಯದ ಚರಾಸ್ಥಿಯನ್ನು ಘೋಷಿಸಿದ್ದಾರೆ.
ಕೃಷಿ, ಕೃಷಿಯೇತರ ಭೂಮಿ, ಶಾಲಾ ಕಟ್ಟಡ ಸೇರಿದಂತೆ ಅವರ ಬಳಿ ಇರುವ ಸ್ಥಿರಾಸ್ತಿ ಮೌಲ್ಯ 8.52 ಕೋಟಿ ರೂಪಾಯಿಯದ್ದಾಗಿದ್ದರೆ ಒಟ್ಟು 39.68 ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ. 48 ವರ್ಷದ ಸ್ವಾಮೀಜಿ ವಿರುದ್ಧ ಮೂರು ಪ್ರಕರಣಗಳು ಬಾಕಿ ಉಳಿದಿವೆ.
ಸ್ವಾಮೀಜಿ ಬಳಿ ಎರಡು ಟೊಯೊಟಾ ಇನ್ನೋವಾ, ಟ್ರ್ಯಾಕ್ಟರ್ ಮತ್ತು ಶಾಲಾ ಬಸ್ ಇದೆ. ಅಲ್ಲದೆ ಅವರು 4.35 ಲಕ್ಷ ಮೌಲ್ಯದ 7.82 ಕೆಜಿ ಬೆಳ್ಳಿ, 1.17 ಲಕ್ಷ ಮೌಲ್ಯದ 18.9 ಗ್ರಾಂ ಚಿನ್ನವಿದೆ.