ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ, ಇಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕಿಳಿಯುವುದಾಗಿ ಹೇಳಿಕೆ ನೀಡಿದ ಈಶ್ವರಪ್ಪ ಅವರು ಇಂದು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಬಳಿ ಪ್ರಚಾರ ನಡೆಸಿದರು.
ಈ ಕುರಿತು ಮಾಹಿತಿ ನೀಡಿದ ಅವರು ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಇವತ್ತು ಕೋರ್ಟ್ ಮುಂಭಾಗದಲ್ಲಿ ವಕೀಲರನ್ನ ಭೇಟಿ ಮಾಡಿದ್ದೇನೆ. ವಕೀಲರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಿಮ್ಮ ನಿರ್ಧಾರ ಸರಿಯಿದೆ ಬೆಂಬಲ ಕೊಡ್ತೇವೆ ಎಂದಿದ್ದಾರೆ ಎಂದು ಹೇಳಿದ್ದಾರೆ.
ವಿಜಯೇಂದ್ರ ವಿರುದ್ಧ ಈಶ್ವರಪ್ಪ ವಾಗ್ದಾಳಿ:
ವಿಜಯೇಂದ್ರ ಹೇಳಿಕೆ ವಿರುದ್ಧ ಕಿಡಿಕಾರಿದ ಈಶ್ವರಪ್ಪ ಅವರು ವಾಗ್ದಾಳಿ ನಡೆಸಿದರು ನಿನ್ನ ಪುಕ್ಸಟ್ಟೆ ಮಾತುಗಳಿಗೆ ನಾನು ಬೆಲೆ ಕೊಡಲ್ಲ.. ರಾಜ್ಯಾಧ್ಯಕ್ಷ ಆಗೋಕೆ ನಿನಗೇನು ಯೋಗ್ಯತೆ ಇದೆ..? ನಲವತ್ತು ವರ್ಷ ಪಕ್ಷಕ್ಕಾಗಿ ನಾನು ಶ್ರಮ ಹಾಕಿದ್ದೇನೆ. ನಿಮ್ಮಪ್ಪನ ಶ್ರಮದಿಂದ ನೀನು ರಾಜ್ಯಾಧ್ಯಕ್ಷ ಆಗಿದ್ದೀಯಾ.. ಈ ರೀತಿ ಮಾತಾಡೋಕೆ ನಿನಗೆ ಯೋಗ್ಯತೆ ಇಲ್ಲ.. ಜಿಲ್ಲೆಯ ಜನಕ್ಕೆ ನಾನು ಏನು ಮಾಡಿದ್ದೇನೆ ಜಿಲ್ಲೆಯ ಜನಕ್ಕೆ ಗೊತ್ತಿದೆ. ಶಿಕಾರಿಪುರದಲ್ಲಿ 60 ಸಾವಿರ ಇದ್ದ ಲೀಡ್ 10 ಸಾವಿರಕ್ಕೆ ಇಳಿದಿದೆ.
ಹೇ ಹುಷಾರ್…. ನಾನು ಬೇರೆ ಭಾಷೆಯಲ್ಲಿ ಮಾತಾಡಬೇಕಾಗುತ್ತೇ… ಪಕ್ಷಕ್ಕೆ ನಿನ್ನ ಕೊಡುಗೆ ಏನು..? ನೀನು ಇನ್ನು ಬಚ್ಚಾ.. ನೆನಪಿಟ್ಟುಕೋ.. ನನಗೆ ಟೀಕೆ ಮಾಡೋ ಯೋಗ್ಯತೆ ನಿನಗೆ ಇಲ್ಲ, ಬಾಯಿಗೆ ಬಂದಂತೆ ಮಾತನಾಡಲು ಅವಕಾಶ ಕೊಟ್ಟಿಲ್ಲ, ಪಕ್ಷೇತರ ನಿಂತ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳೋದು ಏನು ಬಂತು…? ಪಾರ್ಟಿಯಿಂದ ಹೊರಗೆ ಬಂದಾಯ್ತು ಎಂದರ್ಥ, ಅದರರ್ಥವು ಅವನಿಗೆ ಗೊತ್ತಿಲ್ಲ. ಏನ್ ಕ್ರಮ ತಗೋತ್ತಿಯಾ ತಗೋ ಇಂತಹ ಗೊಡ್ಡು ಬೆದರಿಕೆಗೆ ನಾನು ಹೆದರಲ್ಲ. ಜನ ನನ್ನ ಜೊತೆ ಇದ್ದಾರೆ. ಅಪ್ಪ – ಮಕ್ಕಳ ಶಿಕಾರಿ ನಾನು ಮಾಡುತ್ತೇನೆ ಎಂದ ಈಶ್ವರಪ್ಪ ಗುಡುಗಿದ್ದಾರೆ.