Breaking
Mon. Oct 14th, 2024

ಮಾಜಿ ಐಎಎಸ್ ಅಧಿಕಾರಿ ದಿ. ಕೆ. ಶಿವರಾಮ್ ಪತ್ನಿ ಇಂದು ಕಾಂಗ್ರೆಸ್ ಸೇರ್ಪಡೆ

By Mooka Nayaka News Apr 8, 2024
Spread the love

ಬೆಂಗಳೂರು: ಇತ್ತೀಚೆಗಷ್ಟೆ ನಿಧನರಾದ ಮಾಜ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರ ಪತ್ನಿ ವಾಣಿ ಶಿವರಾಮ್ ಅವರು ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತೀಚೆಗೆ ಹೃದಯಾಘಾತದಿಂದ  ಮಾಜಿ ಐಎಎಸ್ ಅಧಿಕಾರಿ ದಿ. ಕೆ. ಶಿವರಾಮ್ ನಿಧನರಾಗಿದ್ದರು. ಬಿಜೆಪಿ ಮುಖಂಡರು ಆಗಿದ್ದ ಅವರು ಈ ಬಾರಿ ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದರು ಎನ್ನಲಾಗಿತ್ತು.

ಈ ಮಧ್ಯೆ ಇದೀಗ ಕೆ. ಶಿವರಾಮ್ ಪತ್ನಿ ವಾಣಿ ಶಿವರಾಮ್ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ  ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

Related Post