Trending

ನೀಟ್ ಪರೀಕ್ಷೆ ಫಲಿತಾಂಶದ ಆತಂಕ: ಉತ್ತರ ಪ್ರದೇಶದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

Spread the love

ಲಖನೌ : ನೀಟ್ ಮರುಪರೀಕ್ಷೆ ಬರೆದಿದ್ದ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯ ಮರುದಿನವೇ ತನ್ನ ಮನೆಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ವಿದ್ಯಾರ್ಥಿನಿ ತನ್ನ ನೀಟ್ ಪರೀಕ್ಷೆಯ ಸಾಧನೆ ಬಗ್ಗೆ ತೀವ್ರ ಆತಂಕಗೊಂಡಿದ್ದಳು ಹಾಗೂ ನಿರಾಶೆಯಲ್ಲಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಸಹೋದರನಿಗೆ ಉದ್ದೇಶಿಸಿ ಬರೆದಿರುವುದಾಗಿ ಹೇಳಲಾಗುತ್ತಿರುವ ಟಿಪ್ಪಣಿಯಲ್ಲಿ “ನನಗೆ ಏನನ್ನೂ ಮಾಡಲು ಸಾಧ್ಯವಿಲ್ಲ” ಎಂದು ಹಿಂದಿಯಲ್ಲಿ ಉಲ್ಲೇಖಿಸಿದ್ದಾಳೆ.

ವೈದ್ಯೆಯಾಗುವ ಕನಸನ್ನು ಹೊಂದಿದ್ದ ಈ ವಿದ್ಯಾರ್ಥಿನಿ 2021ರಲ್ಲಿ ನೀಟ್ ಉತ್ತೀರ್ಣನಾಗಿದ್ದ ತನ್ನ ಸಹೋದರನಂತಾಗಲು ಬಯಸಿದ್ದಳು. ಕುಟುಂಬದವರ ಪ್ರಕಾರ, ಆಕೆಯನ್ನು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.

ಪೊಲೀಸ್ ಅಧಿಕಾರಿ ನಿರ್ಭಯ್ ಕುಮಾರ್ ಸಿಂಗ್ ಅವರ ಪ್ರಕಾರ, ಡೆತ್‌ನೋಟ್‌ ಪತ್ತೆಯಾದ ಪ್ರಶ್ನೆಪತ್ರಿಕೆಯನ್ನು ವಶಪಡಿಸಿಕೊಂಡು ನ್ಯಾಯ ವಿಜ್ಞಾನ ಹಾಗೂ ಕೈಬರಹ ಪರೀಕ್ಷೆಗೆ ಕಳುಹಿಸಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

[pj-news-ticker]