Trending

ಒಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಅಮೆರಿಕ ದಾಳಿ: ಇಬ್ಬರು ಭಾರತೀಯ ನಾವಿಕರು, ಓರ್ವ ಮುಖ್ಯ ಇಂಜಿನಿಯರ್ ಸಾವು

Spread the love

ಟೆಹ್ರಾನ್: ಹೋರ್ಮುಜ್ ಜಲಸಂಧಿಯ ಸಮೀಪ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯ ನಾವಿಕರು ಮತ್ತು ಓರ್ವ ಮುಖ್ಯ ಇಂಜಿನಿಯರ್ ಸಾವನ್ನಪ್ಪಿದ್ದಾರೆ ಎಂದು ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ (FSUI) ತಿಳಿಸಿದೆ.

FSUI ಪ್ರಧಾನ ಕಾರ್ಯದರ್ಶಿ ಮನೋಜ್ ಯಾದವ್ ಅವರು, ಹಡಗಿನೊಂದಿಗೆ ಸಂಪರ್ಕ ತೀವ್ರವಾಗಿ ವ್ಯತ್ಯಯಗೊಂಡಿದ್ದು, ಸಂಪೂರ್ಣ ಮಾಹಿತಿ ಇನ್ನೂ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ. “ನಾವು ಹಡಗಿನೊಂದಿಗೆ ಸಂಪರ್ಕ ಸ್ಥಾಪಿಸಲು ಸಾಧ್ಯವಾಗಿಲ್ಲ,” ಎಂದು ಯಾದವ್ ಸುದ್ದಿಸಂಸ್ಥೆಗೆ ತಿಳಿಸಿದರು.

“ನನಗೆ ಲಭ್ಯವಾದ ಇತ್ತೀಚಿನ ಮಾಹಿತಿಯ ಪ್ರಕಾರ, ಇಬ್ಬರು ನಾವಿಕರು ಸಾವನ್ನಪ್ಪಿದ್ದಾರೆ, ಮುಖ್ಯ ಇಂಜಿನಿಯರ್ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ’ ಎಂದು ಹೇಳಿದರು.

ಸಾವನ್ನಪ್ಪಿದ ಹಾಗೂ ನಾಪತ್ತೆಯಾಗಿರುವ ಮೂವರು ಭಾರತೀಯರು ವಿಭಿನ್ನ ರಾಜ್ಯಗಳವರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. “ಈ ಮೂವರು ಹಿಮಾಚಲ ಪ್ರದೇಶ, ದೇಓರಿಯಾ (ಉತ್ತರ ಪ್ರದೇಶ) ಮತ್ತು ಆಂಧ್ರ ಪ್ರದೇಶದವರು,” ಎಂದು ಅವರು ಹೇಳಿದರು.

[pj-news-ticker]