Trending

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ ಎಂದಿರುವುದು ಡಿಕೆಶಿಗೆ ಯಾವಾಗಲೂ ತೂಗುಗತ್ತಿ: ಬೊಮ್ಮಾಯಿ

Spread the love

ಹಾವೇರಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ ಎಂದಿರುವುದು ಡಿ.ಕೆ.ಶಿವಕುಮಾರ್‌ಗೆ ಯಾವಾಗಲೂ ತೂಗುಗತ್ತಿ ಎಂದು ಸಂಸದ ಹಾಗೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆದರೆ ಅದೊಂದು ತೂಗು ಕತ್ತಿ. ತೂಗು ಕತ್ತಿ ತೂಗಿದ್ದಕ್ಕಿಂತ ಬಿದ್ದಿದ್ದೇ ಹೆಚ್ಚು. ರಾಜ್ಯದಲ್ಲಿ ಐದು ವರ್ಷ ಸಿಎಂ ಆಗಿದ್ದವರು ಮರು ಸಿಎಂ ಆದಾಗ 7ನೇ ವರ್ಷಕ್ಕೆ ಆಘಾತ ಬರುತ್ತದೆ.

ಈ ಹಿಂದೆ ಎಸ್.ನಿಜಲಿಂಗಪ್ಪ ಮೊದಲ ಅವಧಿ ಪೂರ್ಣಗೊಳಿಸಿದರು. ಎರಡನೇ ಬಾರಿ ಸಿಎಂ ಆದಾಗ ಏಳು ವರ್ಷಕ್ಕೆ ಸಿಎಂ ಸ್ಥಾನದಿಂದ ಇಳಿದರು. ದೇವರಾಜ್ ಅರಸು, ರಾಮಕೃಷ್ಣ ಹೆಗಡೆ ಇದೀಗ ಸಿಎಂ ಸಿದ್ದರಾಮಯ್ಯ ಸರದಿ. ಇದಕ್ಕೆ ಸೆವೆನ್ ಇಯರ್ಸ್ ಸಿಂಡ್ರೋಮ್ ಎನ್ನುತ್ತಾರೆ ಎಂದು ಬೊಮ್ಮಾಯಿ ತಿಳಿಸಿದರು.

ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ: ಸಿದ್ದರಾಮಯ್ಯ ಒಬ್ಬ ಸಮಾಜವಾದಿ ಹಿನ್ನೆಲೆಯಲ್ಲಿ ಸಮಾನತೆ, ಸಾಮಾಜಿಕ, ನ್ಯಾಯದ ಬಗ್ಗೆ ಕಳಕಳಿ ಇರುವ ನಾಯಕ. ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸುವ ಮೂಲಕ ಕಾಂಗ್ರೆಸ್ ಹಿಂದುಳಿದ ವರ್ಗಕ್ಕೆ ಕೊಡಲಿ ಪೆಟ್ಟು ನೀಡಿದೆ. ಕಾಂಗ್ರೆಸ್‌ನವರಿಗೆ ಯಾವತ್ತೂ ಬದ್ದತೆ ಇಲ್ಲ, ಅವರು ಹಿಂದುಳಿದ ವರ್ಗವನ್ನು ನಿರಂತರವಾಗಿ ಬಳಕೆ ಮಾಡಿಕೊಂಡು ಬಂದಿದ್ದಾರೆ ಎಂದು ಟೀಕಿಸಿದರು.

[pj-news-ticker]