Trending

ಸಹ ಕೈದಿಗಳಿಂದ ನಿರಂತರ ಬೆದರಿಕೆ, ನಿಂದನೆ.. ಜಾಮೀನು ಅರ್ಜಿಯಲ್ಲಿ ಅಳಲು ತೋಡಿಕೊಂಡ ದರ್ಶನ್

Spread the love

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ  ಜೈಲು ಸೇರಿರುವ ನಟ ದರ್ಶನ್‌ ಜಾಮೀನಿಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ(ಮೇ. 4) ನಡೆಯಲಿದೆ.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ತಮ್ಮ ಜಾಮೀನು ಅರ್ಜಿಯಲ್ಲಿ ಜೈಲಿನ ಒಳಗಿನ ಸ್ಥಿತಿಗತಿ ಮತ್ತು ತಮ್ಮ ವೃತ್ತಿ ಜೀವನದ ಸಂಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಜೈಲಿನಲ್ಲಿ ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ದರ್ಶನ್‌ ತಾವು ಸಲ್ಲಿಸಿರುವ ಅರ್ಜಿಯಲ್ಲಿ ದೂರಿದ್ದಾರೆ.

ಅರ್ಜಿಯಲ್ಲಿ ಏನಿದೆ?:

ನಿಯಮಗಳನ್ನು ಮೀರಿ ಕ್ವಾರಂಟೈನ್‌ ಸೆಲ್‌ನಲ್ಲಿ ತಮ್ಮನ್ನು ಇರಿಸಲಾಗಿದೆ. ಇದರಿಂದಾಗಿ ಮಾನಸಿಕಹ ಗಾಗೂ ದೈಹಿಕವಾಗಿ ಹಿಂಸೆ ಆಗುತ್ತಿದೆ. ಸಹಕೈದಿಗಳು ನಿರಂತರವಾಗಿ ಬೆದರಿಕೆ ಹಾಗೂ ನಿಂದಿಸುತ್ತಿದ್ದಾರೆ. ನನ್ನ ವಿರುದ್ಧ ನಡೆಯುತ್ತಿರುವ ನೆಗೆಟಿವ್‌ ಪ್ರಚಾರದಿಂದಾಗಿ ಇಲ್ಲಿನ (ಜೈಲು) ಒಳಗಿನ ಸಮಸ್ಯೆ ಮತ್ತಷ್ಟು ಬಿಗಾಡಿಸುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ.

ಇನ್ನು ತಮ್ಮನ್ನು ತಾರತಮ್ಯ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ. ಕುಟುಂಬಸ್ಥರ ಭೇಟಿಗೆ ಸಮಾನ ಸಮಯ ನೀಡುತ್ತಿಲ್ಲ ಹಾಗೂ ಹೊರಗಿನಿಂದ ಆಹಾರ, ಬಟ್ಟೆ ಮತ್ತು ಹಾಸಿಗೆ ಪಡೆಯಲು ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರೂ ಕೇವಲ 2-3 ಬಾರಿ ಮಾತ್ರ ಫಿಸಿಯೋಥೆರಪಿ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

[pj-news-ticker]