ಶಿವಮೊಗ್ಗ : “ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಭವಾವಳಿ” ಎಂಬ ವಿಷಯದ ಮೇಲೆ (ಶಿವಕೋಟ್ಯಾಚಾರ್ಯ, ಪಂಪ, ಪೊನ್ನ, ರನ್ನ, ಜನ್ನರ ಕೃತಿಗಳನ್ನು ಅನುಲಕ್ಷಿಸಿ) ಸಂಶೋಧನಾ ಮಹಾಪ್ರಬಂಧವನ್ನು ಸಿದ್ಧಗೊಳಿಸಿರುವ ಗಣೇಶ್ ನಾಯ್ಕ್ ಎ.ಆರ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಪಿ.ಹೆಚ್.ಡಿ ಪದವಿ ಪ್ರದಾನ ಮಾಡಿದೆ.
ಇವರಿಗೆ ತುಮಕೂರು ವಿಶ್ವವಿದ್ಯಾಲಯ ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ.ಮೋಹನ ಎಚ್ ಎಸ್ ಮಾರ್ಗದರ್ಶನ ಮಾಡಿರುತ್ತಾರೆ.
ಎಂ.ಎ., ಬಿ.ಎಡ್., ಕೆಸೆಟ್, ನೆಟ್-ಜೆಆರ್ಎಫ್, ಪಿಜಿಡಿ ಸೇರಿದಂತೆ ವಿವಿಧ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ ಅವರು, ಪ್ರಸ್ತುತ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸಿದ್ದಾಪುರ (ಮಳಲಿಮಕ್ಕಿ) ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅರಸನಘಟ್ಟ ತಾಂಡ ಮೂಲದ ಗಣೇಶ್ ನಾಯ್ಕ್ ಅವರು ತಮ್ಮ ಗ್ರಾಮದಲ್ಲಿ ಎರಡನೇ ಪಿ.ಹೆಚ್.ಡಿ ಪದವಿಧರರಾಗಿರುವುದು ಗಮನಾರ್ಹವಾಗಿದ್ದು, ಅವರ ಈ ಸಾಧನೆಗೆ ಶಿಕ್ಷಣ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
