Trending

ಪ್ಯಾರಾಚೂಟ್ ತರಬೇತಿ ವೇಳೆ ಅವಘಡ : 50 ಅಡಿ ಮೇಲಿನಿಂದ ಬಿದ್ದು ಇಬ್ಬರು ಯೋಧರಿಗೆ ಗಾಯ

Spread the love

ಬಳ್ಳಾರಿ: ಯೋಧರ ಪ್ಯಾರಾಚೂಟ್ ತರಬೇತಿ ಅವಧಿಯಲ್ಲಿ ದುರಂತವೊಂದು ಸಂಭವಿಸಿದ್ದು, 50 ಅಡಿ ಮೇಲಿನಿಂದ ಜಿಗಿದ ಇಬ್ಬರು ಯೋಧರ ಕಾಲು ಮುರಿದಿದೆ ಎಂದು ವರದಿಯಾಗಿದೆ.

ಬಳ್ಳಾರಿ ಹೊರವಲಯದ ಪೀಡಿಹಳ್ಳಿ ಪ್ಯಾರಾಚೂಟ್ ತರಬೇತಿ ನಡೆಯುತ್ತಿತ್ತು. ಯೋಧ ಚಿನ್ನ ರಾಜ್ ಅವರ ಕಾಲಿನ ಮೂಳೆಮುರಿತವಾಗಿದ್ದು ಮತ್ತೊಬ್ಬ ಯೋಧನಿಗೂ ಕಾಲಿನ ಮೂಳೆ ಮುರಿತವಾಗಿದೆ.ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ವಿಮಾನದಿಂದ ಯೋಧರು ಜಂಪ್ ಮಾಡಿದ್ದಾರೆ. ಈ ವೇಳೆ ಪ್ಯಾರಾಚೂಟ್ ಓಪನ್ ಆಗಿದೆ. ಬಳಿಕ ಲ್ಯಾಂಡಿಂಗ್ ಸಂದರ್ಭದಲ್ಲಿ ಸಮಸ್ಯೆ ಉಂಟಾಗಿ ಇಬ್ಬರು ಯೋಧರು ಹೊಲದಲ್ಲಿ ಬಿದ್ದಿದ್ದಾರೆ. ತಕ್ಷಣ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಭಾರತೀಯ ವಾಯು ಸೇನೆಯಿಂದ ಪ್ಯಾರಾಚೂಟ್ ತರಬೇತಿ ನೀಡಲಾಗುತ್ತಿದ್ದು, ಒಟ್ಟು 417 ಸೈನಿಕರು ಇದ್ದರು ಎಂದು ತಿಳಿದು ಬಂದಿದೆ. ಬಳ್ಳಾರಿಯ ಐಟಿಐ ಕಾಲೇಜು ಮೈದಾನಕ್ಕೆ ಬಂದಿಳಿದ ಸೇನಾ ಹೆಲಿಕಾಪ್ಟ‌ರ್ ಮೂಲಕ ಚಿನ್ನರಾಜ್ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

[pj-news-ticker]