Breaking
Sun. Sep 8th, 2024

ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

By Mooka Nayaka News Mar 28, 2024
Spread the love

ತೀರ್ಥಹಳ್ಳಿ: ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕದಿಂದ 28ಕ್ಕೆ 28 ಕ್ಷೇತ್ರ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಜಿಲ್ಲೆ, ತಾಲೂಕು ಮತ್ತು ಬೂತ್ ಮಟ್ಟದಲ್ಲಿ ಎಲ್ಲಾ ಕಾರ್ಯಕರ್ತರು ಅತ್ಯಂತ ವಿಶ್ವಾಸದಿಂದ ಚುನಾವಣೆ ಎದುರಿಸಲು ಸಜ್ಜಾಗಿದ್ದೇವೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ನೂತನ ಬಿಜೆಪಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಜಗತ್ತಿನಲ್ಲಿ 5 ನೇ ಆರ್ಥಿಕ ಶಕ್ತಿಯಾಗಿ ಭಾರತ ದೇಶ ಕಂಡಿದೆ. ಜಗತ್ತಿನ 3 ನೇ ಬಲಿಷ್ಠ ಸೇನೆಯನ್ನು ನಾವು ಕಟ್ಟಿದ್ದೇವೆ. ಅಭಿವೃದ್ಧಿಯ ವಿಚಾರದಲ್ಲಿ ರೈಲ್ವೆ, ವಿಮಾನ, ಕೋವಿಡ್ ವೇಳೆ 150 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಿರುವುದು, ಬಡವರ ಪರವಾದ ಯೋಜನೆ, ಹೀಗೆ ಅಭಿವೃದ್ಧಿಯಲ್ಲಿ ಒಳ್ಳೊಳ್ಳೆ ಕೆಲಸ ಮಾಡಿದ್ದೇವೆ. ಇದರಿಂದ ಈ ಬಾರಿ 28 ಕ್ಕೆ 28 ಕ್ಷೇತ್ರ ಗೆಲ್ಲಿಸುತ್ತೇವೆ ಎಂದರು.

ಕರ್ನಾಟಕ ರಾಜ್ಯದಲ್ಲಿ ಕಳೆದ ಬಾರಿ ಜನರಿಗೆ ಆಮಿಷ ಒಡ್ಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು. ಅದರಲ್ಲಿ ಸಾಧನೆ ಏನಿಲ್ಲ, ಬಿಜೆಪಿ ವಿರೋಧ ಪಕ್ಷದಲ್ಲಿ ಇದೆ. ಅಭಿವೃದ್ಧಿಯನ್ನು ಬಲಿ ಕೊಟ್ಟು ಅಧಿಕಾರದಲ್ಲಿ ಕಾಂಗ್ರೆಸ್ ಕೂತಿದೆ, ಕಳೆದ ಒಂಬತ್ತು ತಿಂಗಳಲ್ಲಿ ಒಂಬತ್ತು ಪೈಸೆಯೂ ಕೂಡ ಬಂದಿಲ್ಲ, ಕರ್ನಾಟಕದಲ್ಲಿ ಅಂಧ ದರ್ಬಾರ್ ನಡೆಯುತ್ತಿದೆ ಎಂದು ಹೇಳಿದರು.

ಜಾತಿ ಜಾತಿ ಒಡೆದು ಕುತಂತ್ರ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ. ಆರ್ಥಿಕ ಸ್ಥಿತಿ ದಿವಾಳಿ ಎದ್ದು ಹೋಗಿದೆ. ಕರ್ನಾಟದಲ್ಲಿ ಬರವಿದ್ದು, ನೀರು ಕೊಡಲು ಆಗದೇ ಕೇಂದ್ರ ಸರಕಾರದ ವಿರುದ್ದ ಮಾತಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಉಡುಪಿ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ ನಮ್ಮ ಪಕ್ಷದವರು ಅಲ್ಲದ ಕೆಲವರು ಗೋ ಬ್ಯಾಕ್ ಎಂದರು. ಶೋಭಾ ಕರಂದ್ಲಾಜೆ ಅವರನ್ನು ನಾವು ಬೇಡ ಎಂದಿದ್ದಲ್ಲ. ಇದು ಹೈಕಮಾಂಡ್ ನಿರ್ಧಾರ. ನನಗೆ ವಿಧಾಸಭಾ ಚುನಾವಣೆಯಲ್ಲಿ ಅನ್ಯಾಯವಾಗಿಲ್ಲ. ನನಗೆ ಸೀಟ್ ಸಿಕ್ಕಾಗ ಸಹ ಬೇರೆಯವರಿಗೆ ಹಾಗೆ ಅನಿಸಿರುತ್ತದೆ. ಆದರೆ ನನಗೆ ಯಾವುದೇ ರೀತಿ ಬಿಜೆಪಿ ಪಕ್ಷದಿಂದ ಅನ್ಯಾಯವಾಗಿಲ್ಲ. ನಿಷ್ಠಾವಂತ ಕಾರ್ಯಕರ್ತನಿಗೆ ಬ್ರಹ್ಮನಿಗಿಂತ ಪಕ್ಷವೇ ಮುಖ್ಯ ಎಂದರು.

Related Post