Trending

ಸಿಂಗರ್ ಮಂಗ್ಲಿ ವಿರುದ್ಧ ಹೈದರಾಬಾದ್‌ನಲ್ಲಿ ಎಫ್‌ಐಆರ್ : 10 ಕೋಟಿ ರೂ. ವಂಚನೆ – ಪ್ರಾಣ ಬೆದರಿಕೆ ಆರೋಪ

Spread the love

ಬಹುಭಾಷಾ ಗಾಯಕಿ ಮಂಗ್ಲ ಅವರು (ಸತ್ಯವತಿ ರಾಥೋಡ್) ಹಾಡುಗಳ ಜೊತೆಗೆ ವಿವಾದಗಳ ಮೂಲಕವು ಸುದ್ದಿಯಾಗುತ್ತಲೇ ಇರುತ್ತಾರೆ. ಈಚೆಗಷ್ಟೇ ಅವರು ಹೆಸರಿನಲ್ಲಿ ಮೈಕ್ರೋ ಫೈನಾನ್ಸ್‌ ಆರಂಭಿಸಿ, ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಆ ಬಗ್ಗೆ ಮಂಗ್ಲಿ ಸ್ಪಷ್ಟನೆಯನ್ನು ಕೂಡ ನೀಡಿದ್ದರು. ಈ ಮಧ್ಯೆ ಮಂಗ್ಲಿ ವಿರುದ್ಧ 10 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಮಂಗ್ಲಿ ವಿರುದ್ಧ ಕೇಸ್‌

ಹೈದರಾಬಾದ್‌ನಲ್ಲಿ ಮಂಗ್ಲಿ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ. ಗಾಯಕಿ ಮಂಗ್ಲಿ ಅವರು ತಮಗೆ ಸುಮಾರು 10 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಕೇವಲ ಆರ್ಥಿಕ ವಂಚನೆ ಮಾತ್ರವಲ್ಲದೆ. ಮಂಗ್ಲಿ ತಮಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದೀಗ ಈ ದೂರಿನ ಮೇರೆಗೆ ಪೊಲೀಸರು ಮಂಗ್ಲಿ ಸೇರಿದಂತೆ ಅವರ ಸಹೋದರ ಮತ್ತು ಇತರ ಮೂವರ ವಿರುದ್ಧ ಬಿಎನ್‌ಎಸ್ (BNS) ಸೆಕ್ಷನ್ 351 (2), 352 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹಲವು ವಿವಾದಗಳಲ್ಲಿ ಮಂಗ್ಲಿ

ಮಂಗ್ಲಿ ಅವರ ವೃತ್ತಿಜೀವನದಲ್ಲಿ ಇಂತಹ ವಿವಾದಗಳನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಹಲವು ಸಂದರ್ಭಗಳಲ್ಲಿ ಸುದ್ದಿಯಲ್ಲಿದ್ದರು. 2021ರಲ್ಲಿ ಬೋನಾಲು ಹಾಡೊಂದರಲ್ಲಿ ದೇವಿಯನ್ನು ಉದ್ದೇಶಿಸಿ ಬಳಸಿದ ಪದಗಳು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿವೆ ಎಂಬ ಆರೋಪಗಳು ಕೇಳಿಬಂದಿದ್ದವು.

2025ರ ಜೂನ್‌ನಲ್ಲಿ ಚೇವೆಳ್ಳಾದ ರೆಸಾರ್ಟ್‌ವೊಂದರಲ್ಲಿ ನಡೆದ ಅವರ ಜನ್ಮದಿನದ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಅನುಮತಿಯಿಲ್ಲದೆ ಮದ್ಯ ಮತ್ತು ಸೌಂಡ್ ಸಿಸ್ಟಮ್ ಬಳಕೆ ಹಾಗೂ ಡ್ರಗ್ಸ್ ಬಳಕೆ ಆರೋಪಗಳಿಂದ ಆ ಸಂಭ್ರಮಾಚರಣೆ ವಿವಾದಕ್ಕೀಡಾಗಿತ್ತು.

ಪ್ರತಿಯೊಂದು ವಿವಾದ ಎದುರಾದಾಗಲೂ ತಮ್ಮದೇ ಶೈಲಿಯಲ್ಲಿ ವಿವರಣೆ ನೀಡುತ್ತಿರುವ ಮಂಗ್ಲಿ, ಈಗ ದಾಖಲಾಗಿರುವ 10 ಕೋಟಿ ರೂ. ವಂಚನೆಯ ಪ್ರಕರಣಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

[pj-news-ticker]