Trending

ಏ. 30 ರಿಂದ ಮೇ 13ರವರೆಗೆ ದ್ವಿತೀಯ ಪರೀಕ್ಷೆ-2 : ಅಂಕ ಸುಧಾರಣೆಗೆ ಮತ್ತೊಂದು ಅವಕಾಶ

Spread the love

ಬೆಂಗಳೂರು: ರಾಜ್ಯ ಶಾಲಾ ಶಿಕ್ಷಣ ಮತ್ತು ಪರೀಕ್ಷಾ ಮಂಡಳಿಯು ದ್ವಿತೀಯ ಪಿಯುಸಿ ಪರೀಕ್ಷೆ 2ರ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಏಪ್ರಿಲ್ 30ರಿಂದ ಮೇ 13ರವರೆಗೆ ಪರೀಕ್ಷೆಗಳು ನಡೆಯಲಿವೆ.

ಈ ಪರೀಕ್ಷೆಗಳು 2 ಅವಧಿಗಳಲ್ಲಿ ನಡೆಯಲಿದ್ದು, ಮೊದಲ ಅವಧಿಯು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ 2ನೇ ಅವಧಿಯು ಮಧ್ಯಾಹ್ನ 2ರಿಂದ ಸಂಜೆ 4:15ರವರೆಗೆ ನಡೆಯಲಿದೆ.

ಪರೀಕ್ಷೆಯು ಏಪ್ರಿಲ್ 30ರಂದು ಕನ್ನಡ ಮತ್ತು ಅರೆಬಿಕ್ ವಿಷಯಗಳೊಂದಿಗೆ ಆರಂಭವಾಗಲಿದೆ.

ಮೇ 2ರಂದು ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳು ನಡೆದರೆ, ಮೇ 4ರಂದು ಇಂಗ್ಲಿಷ್ ಪರೀಕ್ಷೆ ನಡೆಯಲಿದೆ.

ಮೇ 5ರಂದು ವ್ಯವಹಾರ ಅಧ್ಯಯನ, ಭೌತಶಾಸ್ತ್ರ ಹಾಗೂ ಶಿಕ್ಷಣಶಾಸ್ತ್ರ ವಿಷಯಗಳಿಗೆ ಪರೀಕ್ಷೆ ನಿಗದಿಯಾಗಿದೆ.

ಮೇ 6ರಂದು ಅರ್ಥಶಾಸ್ತ್ರ ಮತ್ತು ಜೀವಶಾಸ್ತ್ರ, ಮೇ 7ರಂದು ಇತಿಹಾಸ, ಗಣಿತ ಮತ್ತು ಗೃಹವಿಜ್ಞಾನ ಪರೀಕ್ಷೆಗಳು ನಡೆಯಲಿವೆ.

ಮೇ 8ರಂದು ರಾಜ್ಯಶಾಸ್ತ್ರ, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ಪರೀಕ್ಷೆಗಳು ಜರುಗಲಿದ್ದು, ಮೇ 9ರಂದು ಹಿಂದಿ ಪರೀಕ್ಷೆ ಇರಲಿದೆ. ಮೇ 11ರಂದು ಸಮಾಜಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ, ಮೇ 12ರಂದು ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೂಗರ್ಭಶಾಸ್ತ್ರ ಮತ್ತು ಮೂಲ ಗಣಿತ ಪರೀಕ್ಷೆಗಳು ನಡೆಯಲಿವೆ. ಮೇ 13ರಂದು ಸಂಸ್ಕೃತ, ಉರ್ದು ಸೇರಿದಂತೆ ವಿವಿಧ ಭಾಷಾ ಪರೀಕ್ಷೆಗಳು, ಹಿಂದೂಸ್ಥಾನಿ ಸಂಗೀತ ಮತ್ತು ಎನ್‌ಎಸ್‌ಕ್ಯೂಎಫ್ ಕೋರ್ಸ್‌ಗಳ ಪರೀಕ್ಷೆ ಇರಲಿದೆ.

[pj-news-ticker]