Trending

ತೀರ್ಥಹಳ್ಳಿ : ಶಿಕಾರಿಗೆ ಇಟ್ಟಿದ್ದ ಕಚ್ಚಾ ಬಾಂಬ್‌ ಸಿಡಿದು ಮಹಿಳೆಯ 5 ಬೆರಳು ಕಟ್

Spread the love

ತೀರ್ಥಹಳ್ಳಿ: ಹಂದಿ ಶಿಕಾರಿ ಮಾಡಲು ಇಟ್ಟಿದ್ದ ವಸ್ತು ಸಿಡಿದು ಮಹಿಳೆಯೊಬ್ಬರ ಕೈ ಐದು ಬೆರಳುಗಳು ಸಂಪೂರ್ಣ ತುಂಡಾಗಿರುವ ಘಟನೆ ನೆಂಟೂರಿನಲ್ಲಿ ನಡೆದಿದೆ.

ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಪಂ ವ್ಯಾಪ್ತಿಯ ನೆಂಟೂರಿನ ಕಮಲಮ್ಮ (72 ) ಗಾಯಗೊಂಡ ಮಹಿಳೆ.

ತೋಟದಲ್ಲಿ ಹಂದಿ ಶಿಕಾರಿ ಮಾಡಲು ಗೋಟು ಅಡಿಕೆ ಒಳಗೆ ಕಚ್ಚಾ ಬಾಂಬ್ ಇಡಲಾಗಿತ್ತು. ಅದನ್ನು ನಾಯಿ ಕಚ್ಚಿಕೊಂಡು ಮನೆಯ ಅಂಗಳಕ್ಕೆ ತಂದಿದೆ. ಅದನ್ನು ಕಮಲಮ್ಮ ಮುಟ್ಟಿದಾಗ ಏಕಾಏಕಿ ಸಿಡಿದಿದ್ದು ಕೈನ ಐದು ಬೆರಳುಗಳು ತುಂಡಾಗಿವೆ. ಕಾಲಿಗೆ ಗಾಯವಾಗಿದೆ. ಆಗುಂಬೆ ಠಾಣೆ ಪಿಎಸ್ ಐ ಶಿವನಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.

[pj-news-ticker]