Trending

ಹಾವೇರಿ : ಜಾನಪದ ವಿವಿಯ ಅಕ್ರಮಗಳ ತನಿಖೆಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಆದೇಶ

Spread the love

ಹಾವೇರಿ : ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೋಟಗೋಡಿ ಬಳಿಯಿರುವ ಜಾನಪದ ವಿಶ್ವವಿದ್ಯಾನಿಲಯ ವಿವಿಧ ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತೆ. ಇದೀಗ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಜಾನಪದ ವಿವಿಯ ಅಕ್ರಮಗಳ ಕುರಿತು ನಿವೃತ್ತ ನ್ಯಾಯಮೂರ್ತಿ ಉಮೇಶ್ ಅಡಿಗ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ.

ಜಾನಪದ ವಿವಿಯಲ್ಲಿ ಕೆಲ ಅಕ್ರಮ ನಡೆದಿವೆ ಎಂದು ಕೆಲ ಸಂಘಟನೆಗಳು ಆರೋಪ ಮಾಡಿದ್ದವು. ವಿವಿ ವಿರುದ್ದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಘನವೆತ್ತ ರಾಜ್ಯಪಾಲ ಥಾವರಚೆಂದ ಗೆಹ್ಲೋಟ್ ತನಿಖೆಗೆ ಆಗ್ರಹಿಸಿದ್ದಾರೆ. ರಾಜ್ಯದ ನಾಲ್ಕು ವಿವಿಗಳ ಅಕ್ರಮಗಳ ತನಿಖೆಗೆ ರಾಜ್ಯಪಾಲರು ಆದೇಶಿಸಿದ್ದು, ಅದರಲ್ಲಿ ಹಾವೇರಿ ಜಿಲ್ಲೆಯ ಜಾನಪದ ವಿವಿ ಸಹ ಒಂದಾಗಿದೆ.

ರಾಜ್ಯಪಾಲರ ಆದೇಶ ಸ್ವಾಗತಿಸಿದ ಸಂಘಟನೆಗಳು : ಹಾವೇರಿ ಜಿಲ್ಲೆಯ ಜಾನಪದ ವಿವಿಯ ವಿರುದ್ಧ ಆರೋಪ ಮಾಡುತ್ತಿದ್ದ ಸಂಘಟನೆಗಳು ರಾಜ್ಯಪಾಲರ ಕ್ರಮವನ್ನು ಸ್ವಾಗತಿಸಿವೆ.

ಈ ಕುರಿತಂತೆ ರಾಜ್ಯ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಡಾ. ಶಿವಸೋಮಪ್ಪ ನಿಟ್ಟೂರು ಅವರು ಮಾತನಾಡಿ, ‘ಜಾನಪದ ವಿವಿ ಸೇರಿದಂತೆ ರಾಜ್ಯದ ವಿವಿಧ ವಿವಿಗಳ ಅಕ್ರಮಗಳ ಕುರಿತ ತನಿಖೆಗೆ ರಾಜ್ಯಪಾಲರು ಸೂಚಿಸಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಉಮೇಶ ಅಡಿಗ ಅವರ ನೇತೃತ್ವದಲ್ಲಿ ಜಾನಪದ ವಿವಿ ಅಕ್ರಮದ ಕುರಿತು ವಿಚಾರಣೆಗೆ ಸೂಚಿಸಿದ್ದಾರೆ. ಇದನ್ನು ನಮ್ಮ ಒಕ್ಕೂಟ ಸ್ವಾಗತಿಸುತ್ತದೆ. ಇದರಿಂದ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಒಂದು ವೇಳೆ ನ್ಯಾಯ ಸಿಗದಿದ್ದರೆ ಮತ್ತೆ ಹೋರಾಟ ಆರಂಭಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

[pj-news-ticker]