Trending

ಎಪ್‌ ಸ್ಟೀನ್‌ ಜತೆ ಸಂಪರ್ಕ : ಬ್ರಿಟನ್‌ ಮಾಜಿ ರಾಜಕುಮಾರ ಆಂಡ್ರ್ಯೂ ಬಂಧನ

Spread the love

ವಾಷಿಂಗ್ಟನ್:‌ ಅಮೆರಿಕದ ಲೈಂಗಿಕ ಹಗರಣದ ಅಪರಾಧಿ ಜೆಫ್ರಿ ಎಪ್ ಸ್ಟೀನ್ ಜತೆ ಲೈಂಗಿಕ ಅಪರಾಧದಲ್ಲಿ ಭಾಗಿಯಾದ ಶಂಕಿತ ಆರೋಪದ ಮೇಲೆ ಬ್ರಿಟನ್‌ ನ ಮಾಜಿ ರಾಜಕುಮಾರ ಆಂಡ್ರ್ಯೂ ಅವರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.‌

ಜೆಫ್ರಿ ಎಪ್‌ ಸ್ಟೀನ್‌ ಜತೆ ಲೈಂಗಿಕ ಅಪರಾಧದಲ್ಲಿ ಭಾಗಿಯಾದ ಆರೋಪದಿಂದಾಗಿ ಈ ಮೊದಲು ಆಂಡ್ರ್ಯೂ ಬ್ರಿಟನ್‌ ರಾಜಕುಮಾರ ಪಟ್ಟ ಹಾಗೂ ಭದ್ರತೆಯನ್ನು ಕಳೆದುಕೊಳ್ಳುವಂತಾಗಿತ್ತು. ಇದೀಗ ಥೇಮ್ಸ್ ವ್ಯಾಲಿ ಪೊಲೀಸರು ಗುರುವಾರ ಹೇಳಿಕೆಯೊಂದರಲ್ಲಿ, ಯುಕೆ ಕಾನೂನಿನಡಿಯಲ್ಲಿ ಮಾಜಿ ರಾಜಮನೆತನದ ವ್ಯಕ್ತಿಯ ಹೆಸರನ್ನು ಉಲ್ಲೇಖಿಸದೆ, ಅರವತ್ತರ ಹರೆಯದ ವ್ಯಕ್ತಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದರು.

ನಮ್ಮ ದೇಶದ ಮಾರ್ಗಸೂಚಿ ಪ್ರಕಾರ ನಾವು ಬಂಧಿತ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸುವುದಿಲ್ಲ” ಎಂದು ತಿಳಿಸಿದೆ.

“ಮಾಹಿತಿಯ ಪರಿಶೀಲನೆಯ ನಂತರ ಈ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಥೇಮ್ಸ್ ವ್ಯಾಲಿ ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಆಂಡ್ರ್ಯೂ ಅವರ ತನಿಖೆ ಆರಂಭಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

2010ರ ಜೆಫ್ರಿ ಎಪ್‌ ಸ್ಟೀನ್‌ ಗೆ ಸಂಬಂಧಿಸಿದ ಲೈಂಗಿಕ ಅಪರಾಧ ಹಾಗೂ ಹಣಕಾಸು ವಹಿವಾಟಿನ ಕುರಿತು ತನಿಖೆ ನಡೆಸುತ್ತಿರುವುದಾಗಿ ಥೇಮ್ಸ್‌ ವ್ಯಾಲಿ ಪೊಲೀಸರು ಬಹಿರಂಗಪಡಿಸಿದ್ದಾರೆ. ಆಂಡ್ರ್ಯೂ ಅವರ 66ನೇ ವರ್ಷದ ಹುಟ್ಟುಹಬ್ಬದಂದೇ ಬಂಧನಕ್ಕೊಳಗಾಗಿರುವುದಾಗಿ ವರದಿ ತಿಳಿಸಿದೆ.

[pj-news-ticker]