Trending

ಸಾಗರ : ಹಾಡಹಗಲೇ ಕಳ್ಳತನಕ್ಕೆ ಯತ್ನ — ಗ್ರಾಮಸ್ಥರಿಂದ ಕಳ್ಳನ ಬಂಧನ

Spread the love

ಸಾಗರ : ತಾಲ್ಲೂಕಿನ ಕಾನಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಂಕೇರಿ ಗ್ರಾಮದಲ್ಲಿ ಹಾಡಹಗಲೇ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯನ್ನು ಗ್ರಾಮಸ್ಥರು ರೆಡ್‌ಹ್ಯಾಂಡ್‌ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಕಬ್ಬಳ್ಳಿ ಹುಚ್ಚಪ್ಪ ಅವರ ಮನೆಗೆ ಕಿಟಕಿ ಮುರಿದು ನುಗ್ಗಿದ ಆರೋಪಿಯು ಒಳಗಿರುವ ಬೀರು ಒಡೆದು ಸುಮಾರು 50 ಸಾವಿರ ರೂ. ನಗದು ಹಾಗೂ ಚಿನ್ನಾಭರಣ ಕಳವು ಮಾಡಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಮನೆಯೊಳಗಿನಿಂದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಗ್ರಾಮಸ್ಥರು ತಕ್ಷಣವೇ ಒಳನುಗ್ಗಿ ಆರೋಪಿಯನ್ನು ಹಿಡಿದಿದ್ದಾರೆ.

ಬಂಧಿತನನ್ನು ವಿಚಾರಿಸಿದಾಗ ಆತ ವಿಭಿನ್ನ ಊರಿನ ಹೆಸರನ್ನು ಹೇಳುತ್ತಿದ್ದನೆಂಬ ಮಾಹಿತಿ ಲಭ್ಯವಾಗಿದೆ. ನಂತರ ಗ್ರಾಮಸ್ಥರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸೂಚನೆ ಪಡೆದ ಗ್ರಾಮಾಂತರ ಠಾಣೆಯ  ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

[pj-news-ticker]