Trending

80 ಎಸೆತಗಳಲ್ಲಿ 175 ರನ್‌ ಚಚ್ಚಿ ಹಲವು ದಾಖಲೆಗಳನ್ನು ಮುರಿದ ವೈಭವ್‌ ಸೂರ್ಯವಂಶಿ

Spread the love

ಹರಾರೆ: ಇಂಗ್ಲೆಂಡ್‌ ವಿರುದ್ಧ 2026ರ ಅಂಡರ್‌-19 ವಿಶ್ವಕಪ್‌ ಟೂರ್ನಿಯ  ಫೈನಲ್‌ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ಅವರು ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ 80 ಎಸೆತಗಳಲ್ಲಿ 15 ಭರ್ಜರಿ ಸಿಕ್ಸರ್‌ ಹಾಗೂ 15 ಬೌಂಡರಿಗಳೊಂದಿಗೆ 175 ರನ್‌ಗಳನ್ನು ಬಾರಿಸಿದರು. ಮೂಲಕ ಯುವ ಏಕದಿನ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಅವರ ಶತಕದ ಬಲದಿಂದ ಭಾರತ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 411 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಇಂಗ್ಲೆಂಡ್‌ ತಂಡಕ್ಕೆ 412 ರನ್‌ಗಳ ಗುರಿಯನ್ನು ನೀಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿಅತ್ಯುತ್ತಮ ಲಯದಲ್ಲಿರುವ ಸೂರ್ಯವಂಶಿ ಕ್ರಮವಾಗಿ 2, 72, 40, 52, 30, 68 ಹಾಗೂ 175 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ತಮ್ಮ ಬ್ಯಾಟಿಂಗ್‌ ಸಾಮರ್ಥ್ಯ ಏನೆಂದು ಸಾಬೀತುಪಡಿಸಿದ್ದಾರೆ.

ಅಂದ ಹಾಗೆ ಇಂಗ್ಲೆಂಡ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಕೇವಲ 55ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು. ಆ ಮೂಲಕ ಅಂಡರ್‌-19 ವಿಶ್ವಕಪ್‌ ಟೂರ್ನಿಯಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ನಂತರ 100 ರಿಂದ 150 ರನ್‌ಗಳನ್ನು ತಲುಪಲು ಕೇವಲ 16 ಎಸೆತಗಳನ್ನು ತೆಗೆದುಕೊಂಡರು. ಆ ಮೂಲಕ 71 ಎಸೆತಗಳ ಮೂಲಕ 151 ರನ್‌ಗಳನ್ನು ಗಳಿಸಿದರು. ಅಂತಿಮವಾಗಿ ಅವರು 175 ರನ್‌ಗಳಿಗೆ ತಮ್ಮ ಸ್ಪೋಟಕ ಇನಿಂಗ್ಸ್‌ ಅನ್ನು ಮುಗಿಸಿದರು.

[pj-news-ticker]