Trending

“ನನ್ನ ಆಹಾರ ನನ್ನ ಆಯ್ಕೆ, ಜಾತಿ ಎಳೆದು ತರಬೇಡಿ” : ನಟ ಧನಂಜಯ್‌

Spread the love

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅವರು ಮಾಂಸಾಹಾರ ಸೇವನೆ ಬಗ್ಗೆ ಈಚೆಗೆ ಭಾರಿ ಚರ್ಚೆ ಆಗಿತ್ತು. “ಧನಂಜಯ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಮಾಂಸಾಹಾರ ಸೇವನೆ ಮಾಡಿದ್ದು ತಪ್ಪು” ಎಂದೆಲ್ಲಾ ಸೋಶಿಯಲ್‌ ಮೀಡಿಯಾದಲ್ಲಿ ಮಾತುಗಳು ಕೇಳಿಬಂದವು. ಇದೀಗ ಈ ಬಗ್ಗೆ ನಟ ಧನಂಜಯ್‌ ಅವರು ಮಾತನಾಡಿದ್ದಾರೆ. ಸ್ಪಷ್ಟನೆ ಜೊತೆಗೆ ಒಂದಷ್ಟು ಬೇಸರವನ್ನೂ ಹೇಳಿಕೊಂಡಿದ್ದಾರೆ.

“ನನ್ನ ಆಹಾರ, ನನ್ನ ಚಟಗಳು.. ನನ್ನ ಆಯ್ಕೆ ಆಗಿವೆ. ಅದು ನನ್ನ ಇಷ್ಟ. ಬೇರೆ ಯಾರಿಗೂ ತೊಂದರೆ ಕೊಡದೆ ಏನು ಮಾಡಿದರೂ ತಪ್ಪಲ್ಲ ಎಂದು ನಾನು ನಂಬುತ್ತೇನೆ. ಗೆಳೆಯನೊಬ್ಬನ ಹೋಟೆಲ್‌ ಉದ್ಘಾಟನೆಗೆ ಹೋಗಿ, ಅಲ್ಲಿ ಊಟ ಮಾಡಿದ್ದು, ಇಷ್ಟೊಂದು ದೊಡ್ಡ ಸುದ್ದಿ ಆಗುತ್ತದೆ ಎಂದು ನಾನು ಊಹಿಸಿರಲಿಲ್ಲ.

ಜೊತೆಗೆ ಇದರಲ್ಲಿ ಜಾತಿಯನ್ನು ಎಳೆದು ತಂದದ್ದು ನನಗೆ ಇನ್ನಷ್ಟು ಬೇಸರ ಮಾಡಿತು. ನಾನು ಎಂದಿಗೂ ಲಿಂಗಧರಿಸಿ, ಮಾಂಸಾಹಾರ ಸೇವಿಸಿಲ್ಲ. ಅದು ಕುಟುಂಬದವರಿಗೇ ಬೇಸರ ಮಾಡುತ್ತದೆ. ಇನ್ನೊಬ್ಬರಿಗೆ ನೋವು ಮಾಡುವಂತಹ ಯಾವ ಕೆಲಸವನ್ನು ನಾನು ಮಾಡುವುದಿಲ್ಲ” ಎಂದು ಧನಂಜಯ ಹೇಳಿದ್ದಾರೆ.

ಚರ್ಚೆ ಆಗಬೇಕಾದ ವಿಚಾರಗಳೇನು?

“ನಮ್ಮ ಚಿತ್ರರಂಗಕ್ಕಾಗಿ ನಾನು ಮಾಡುತ್ತಿರುವ ಕೆಲಸಗಳ ಬಗ್ಗೆ ಚರ್ಚೆಯಾಗಬೇಕಿದೆ. ಅದು ನನ್ನ ಆಶಯ. ನಾನು ನಟನಾಗಿ ಚಿತ್ರರಂಗಕ್ಕೆ ಬಂದು, ನಿರ್ಮಾಣ ಸಂಸ್ಥೆ ಆರಂಭಿಸಿದೆ. ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಹೊಸಬರಿಗೆ ಅವಕಾಶ ನೀಡಿದೆ. ನಾನು ನೂರಾರು ಕೋಟಿ ವ್ಯಾಪಾರ ಮಾಡುವ ನಿರ್ಮಾಪಕ ಅಲ್ಲದಿದ್ದರೂ, ಚಿತ್ರರಂಗಕ್ಕಾಗಿ ನಾವೆಲ್ಲಾ ಒದ್ದಾಡುತ್ತಿದ್ದೇವೆ. ಆದರೆ ಈ ಬಗ್ಗೆ ಯಾಕೆ ಚರ್ಚೆಯಾಗುತ್ತಿಲ್ಲ” ಎಂದು ಧನಂಜಯ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

[pj-news-ticker]