ಶಿವಮೊಗ್ಗ : ಜನವರಿ ೨೦ರಂದು ಭದ್ರಾವತಿ ನಗರದ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೂತನಗುಡಿ ಏರಿಯಾದಲ್ಲಿ ಚಂದ್ರಪ್ಪ (೮೨), ಜಯಮ್ಮ (೭೨) ಅನುಮಾ ನಾಸ್ಪದವಾಗಿ ಮೃತಪಟ್ಟಿದ್ದು ಅಸಹಜ ಸಾವು ಪ್ರಕರಣ ಹಳೇನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಕೇವಲ ೨೪ ಗಂಟೆಯೊಳಗೆ ಪೊಲೀಸರು ಈ ಸಾವಿನ ರಹಸ್ಯ ಭೇದಿಸಿ, ಸಾರ್ವ ಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್ ಅವರು ವೃದ್ಧ ದಂಪತಿ ಗಳು ಭೂತನಗುಡಿ ಏರಿಯಾದಲ್ಲಿರುವ ಮನೆಯಲ್ಲಿ ವಾಸವಾಗಿದ್ದು ಎಂದಿನಂತೆ ಅವರ ಮಗ ವಿಶ್ವನಾಥ್ ದೂರ ವಾಣಿ ಸಂಪರ್ಕಿಸಲು ಪ್ರಯತ್ನಿಸಿದಾಗ ವೃದ್ಧ ದಂಪತಿಗಳು ಕರೆ ಸ್ವೀಕರಿಸಿದ ಕಾರಣ ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಸುತ್ತಲೂ ಪರಿಚಿತರಿರುವ ನಿವಾಸಿಗಳು ಮನೆಗೆ ಬಂದು ನೋಡಿದಾಗ ಗಂಡ-ಹೆಂಡತಿ ಸಾವಿ ಗೀಡಾಗಿರುವುದು ಕಂಡು ಬಂದಿದೆ.
ತಕ್ಷಣ ಮೃತರ ಮಕ್ಕಳು ಸ್ಥಳಕ್ಕೆ ಬಂದಿದ್ದಾರೆ. ಹಾಗೂ ಹಳೇನಗರ ಪೊಲೀಸ್ ಠಾಣೆಯಲ್ಲಿ ಈ ಸಾವಿನ ಬಗ್ಗೆ ಅನುಮಾನ ಇರುವುದಾಗಿ ದೂರು ದಾಖಲಿಸಿದ್ದಾರೆ. ವಿಶ್ವನಾಥ್ ಅವರು ತನ್ನ ಚಿಕ್ಕಪ್ಪನ ಮಗನಾದ ಡಾ|| ಜಿ.ಪಿ. ಮಲ್ಲೇಶ್ ಅವರಿಗೆ ಫೋನ್ಮಾಡಿ ವಿಚಾರ ತಿಳಿಸಿದಾಗ ಆತ ತಾನು ಜ.೧೯ರಂದು ಮನೆಗೆ ಹೋಗಿದ್ದು ಆರೋಗ್ಯ ವಿಚಾರಿಸಿದ್ದೇ. ಅವರು ಆರೋಗ್ಯವಾಗಿದ್ದರು ಎಂದಿದ್ದಾನೆ.
ಆದರೆ ಮೃತದೇಹ ನೋಡಲು ಬಂದಿಲ್ಲ. ಮೃತ ದಂಪತಿ ಗಳ ಮೈಮೇಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿದ್ದು, ತನ್ನ ಚಿಕ್ಕಪ್ಪನ ಮಗನಾದ ಡಾ|| ಮಲ್ಲೇಶ್ ಅವರ ಮೇಲೆ ಬಲವಾದ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ ಪೊಲೀಸರು ಬೆಳಗಿನಜಾವ ಡಾ|| ಜಿ.ಪಿ. ಮಲ್ಲೇಶ್ ಅವರನ್ನು ಪತ್ತೆಮಾಡಿ ಕರೆತಂದು, ಸದರಿ ಆಸಾಮಿಯನ್ನು ವಿಚಾರಣೆಗೆ ಒಳಪಡಿಸಿದಾಗ, ತನಗೆ ಹಣದ ಅವಶ್ಯಕತೆ ಇದ್ದು ಮಿತಿಮಿರಿದ ಸಾಲ ಇದ್ದುದ್ದರಿಂದ ತನ್ನ ದೊಡ್ಡಪ್ಪ ಚಂದ್ರಪ್ಪ ಮತ್ತು ದೊಡ್ಡಮ್ಮ ಜಯಮ್ಮನವರು ವಯೋವೃದ್ಧರಾಗಿದ್ದು ಮನೆಯಲ್ಲಿ ಇಬ್ಬರೇ ವಾಸವಾಗಿದ್ದರಿಂದ ಅವರ ಕುಶಲೋಪರಿ ವಿಚಾರಿಸುವ ಸಲುವಾಗಿ ಅವರ ಮನೆಗೆ ತೆರಳಿ, ಮಧ್ಯಾಹ್ನ ೧ ಗಂಟೆಯ ಅವಧಿಯಲ್ಲಿ ಅವರಿಗೆ ಕೈ-ಕಾಲು ಗಂಟಿನ ನೋವು ಕಡಿಮೆ ಯಾಗಲು ಇಂಜೆಕ್ಷನ್ ನೀಡುವುದಾಗಿ ತಿಳಿಸಿ,
ಅರವಳಿಕೆ (ಪ್ರೋಪೊಫೋಲ್ ಇಂಜೆಕ್ಷನ್)ನನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡು ಅವರ ಮೈಮೇಲಿದ್ದ ಚಿನ್ನಾಭರಣ, ಮತ್ತು ಮನೆಯ ಬೀರುವಿನಲ್ಲಿದ್ದ ಚಿನ್ನಾ ಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಈತ ಹಳ್ಳಿಯ ಗಿರವಿ ಅಂಗಡಿಯಲ್ಲಿ ಅಂದಾಜು ೮೦ ಗ್ರಾಂನಷ್ಟು ಬಂಗಾರ ಅಡವಿಟ್ಟು ಸಣ್ಣ-ಪುಟ್ಟ ಸಾಲ ತೀರಿಸಿದ್ದು, ಖಾತೆಯಲ್ಲಿ ೫೦ ಸಾವಿರ ರೂ. ಹಣ ಇಟ್ಟುಕೊಂಡಿದ್ದಾನೆ. ಸರಿಯಾದ ಪ್ರಮಾಣ ಇನ್ನಷ್ಟೇ ತಿಳಿಯಬೇಕಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಈ ಸಂಬಂಧ ತನಿಖೆಯಲ್ಲಿ ಪಾಲ್ಗೊಂಡ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ತಂಡದಲ್ಲಿದ್ದ ಎಡಿಎಸ್ಪಿ ಕಾರ್ಯಪ್ಪ, ಮತ್ತು ರಮೇಶ್ ಬಿ., ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್, ಸಿಪಿಐ ನಾಗಮ್ಮ, ಪಿಎಸ್ಐ ಸುನೀಲ್ ಬಿ. ತೇಲಿ, ಹಳೇನಗರ ಪೊಲೀಸ್ ಠಾಣೆಯ ಎಎಸ್ಐ ವೆಂಕಟೇಶ್, ಹೆಚ್ಸಿ ಚಿನ್ನಾನಾಯ್ಕ, ಹೆಚ್ಸಿ ಹಾಲಪ್ಪ, ಪಿಸಿಗಳಾದ ಸುನೀಲ್ಕುಮಾರ್, ಕಾಂತ್ರಾಜ್, ಮಂಜುನಾಥ್, ಬಸವರಾಜ್ ಇವರಿಗೆ ನಗದು ಬಹುಮಾನ ಘೋಷಿಸಿ ಅಭಿನಂದನೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ಕಾರ್ಯಪ್ಪ, ಡಿವೈಎಸ್ಪಿ ಪ್ರಕಾಶ್ ರಾಥೋಡ್, ಸಿಪಿಐ ನಾಗಮ್ಮ ಮತ್ತಿತರರಿದ್ದರು.
