Trending

ಫೆ.24ರಿಂದ ಶಿರಸಿ ಮಾರಿಕಾಂಬಾ ಜಾತ್ರೆ ಆರಂಭ

Spread the love

ಶಿರಸಿ: ಜಾಗೃತ ಶಕ್ತಿಪೀಠಗಳಲ್ಲಿ ಒಂದಾದ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆ ಫೆ.24ರಿಂದ ರಿಂದ ಮಾ.4ರವರೆಗೆ ಜರುಗಲಿದೆ.

ಭಾನುವಾರ ದೇವಾಲಯದಲ್ಲಿ ನಡೆದ ಜಾತ್ರಾ ಮುಹೂರ್ತ ನಿಗದಿ ಸಭೆಯಲ್ಲಿ ಅರ್ಚಕ ಶರಣ ಆಚಾರ್ಯ ಜಾತ್ರೆಯ ದಿನಾಂಕ ಘೋಷಣೆ ಮಾಡಿದರು.

‘ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದ ಪೂರ್ವ ವಿಧಿ-ವಿಧಾನಗಳು ಜ.7ರಿಂದ ಪ್ರಾರಂಭವಾಗಲಿವೆ.

ಫೆ.24ರಮನದು ದೇವಿ ಕಲ್ಯಾಣೋತ್ಸವ, ಫೆ.25ರಂದು ರಥೋತ್ಸವ ಜರುಗಲಿದೆ’ ಎಂದರು.

ಸಭೆಯಲ್ಲಿ ದೇವಾಲಯದ ಅಧ್ಯಕ್ಷ ರವೀಂದ್ರ ಜಿ. ನಾಯ್ಕ, ಶಾಸಕ ಭೀಮಣ್ಣ ನಾಯ್ಕ, ಉಪವಿಭಾಗಾಧಿಕಾರಿ ಕಾವ್ಯಾರಾಣಿ ಕೆ ಇತರರಿದ್ದರು.

[pj-news-ticker]