ಶಿರಸಿ: ತಾಳಗುಪ್ಪ ಶಿರಸಿ ಹುಬ್ಬಳ್ಳಿ ರೈಲ್ವೆ ವಿಸ್ತರಣೆ ಯೋಜನೆಗೆ ಕೇಂದ್ರ ಸರಕಾರವು ಅಂತಿಮ ಸರ್ವೆ ನಡೆಸಿ ಸಂಪೂರ್ಣವಾಗಿ ವಿಸ್ತೃತ ಯೋಜನಾ ವರದಿ ನೀಡಲು 3.95 ಕೋಟಿ ರೂ ಮಂಜೂರು ಮಾಡಿದೆ.
ಮಾಜಿ ಸ್ಪೀಕರ್ ಕಾಗೇರಿ ಅವರು ಕೇಂದ್ರದ ರೈಲ್ವೆ ಸಚಿವರಿಗೆ ಪತ್ರ ಬರೆದು ತಾಳಗುಪ್ಪ ಶಿರಸಿ ಹುಬ್ಬಳ್ಳಿ ರೈಲ್ವೆ ವಿಸ್ತರಣೆ ಯೋಜನೆಗೆ 158 ಕಿ.ಮೀ.ಗಳ ಫೈನಲ್ ಲೋಕೆಶನ್ ಸರ್ವೆ ನಡೆಸಲು ತುರ್ತಾಗಿ ಮಂಜೂರು ಮಾಡಲು ಮನವಿ ಮಾಡಿದ್ದರು.