Trending

ಸ್ಮೃತಿ ಮಂದಾನ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್ : ನಿಶ್ಚಿತಾರ್ಥದ ಉಂಗುರ ಮಾಯ?

Spread the love

ಬೆಂಗಳೂರು: ಸಂಗೀತ ನಿರ್ದೇಶಕ ಪಲಾಶ್‌ ಮುಚ್ಛಲ್‌ ಅವರ ಜೊತೆಗಿನ ವಿವಾಹ ಮುಂದೂಡಿಕೆಯಾದ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಮೊದಲ ಬಾರಿ ಪೋಸ್ಟ್ ಹಾಕಿದ್ದಾರೆ.

ಇಂದು ಮಂದಾನ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಪ್ರಮುಖ ಟೂತ್‌ಪೇಸ್ಟ್ ಬ್ರ್ಯಾಂಡ್‌ವೊಂದರ ಜಾಹೀರಾತಿಗೆ ಸಂಬಂಧಪಟ್ಟ ವಿಷಯ ಇದಾಗಿದೆ.

ಆದರೆ ಈ ಜಾಹೀರಾತನ್ನು ನಿಶ್ಚಿತಾರ್ಥದ ಮೊದಲು ಅಥವಾ ನಂತರ ಚಿತ್ರೀಕರಿಸಲಾಗಿದೆಯೇ ಎಂಬುದು ತಿಳಿದು ಬಂದಿಲ್ಲ.

ಈ ನಡುವೆ ಮಂದಾನ ಅವರ ಬೆರಳಿನಲ್ಲಿ ನಿಶ್ಚಿತಾರ್ಥದ ಉಂಗುರ ಕಾಣಿಸದಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚಗೆ ಗ್ರಾಸವಾಗಿದೆ.

ಇತ್ತೀಚೆಗೆ ಪಲಾಶ್‌ ಮುಚ್ಛಲ್‌ ಅವರೊಂದಿಗಿನ ವಿವಾಹಕ್ಕೆ ಸಂಬಂಧಿಸಿದ ಎಲ್ಲ ಪೋಸ್ಟ್‌ಗಳನ್ನು ಮಂದಾನ ಅಳಿಸಿ ಹಾಕಿದ್ದರು. ಇದು ಅವರಿಬ್ಬರ ನಡುವಣ ಸಂಬಂಧ ಹಳಸಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಈ ಸಂಬಂಧ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.

[pj-news-ticker]