Breaking
Sat. Apr 20th, 2024

ಮಾಜಿ ಸಚಿವ ಪ್ರಭು ಚವ್ಹಾಣ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

By Mooka Nayaka News Mar 15, 2024
Spread the love

ಬೀದರ್: ಔರಾದನ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಪ್ರಭು ಚವ್ಹಾಣ್ ಅವರ ಆರೋಗ್ಯದಲ್ಲಿ ಏರುಪೇರು ಆಗಿರುವ ಹಿನ್ನಲೆ, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದು ತಿಳಿದು ಬಂದಿದೆ.

ಔರಾದದ ತಮ್ಮ ನಿವಾಸದಲ್ಲಿ ಶಾಸಕ ಚವ್ಹಾಣ್ ಅವರಿಗೆ ಕಳೆದ 3 ದಿನಗಳ ಹಿಂದೆ ಎದೆ ಬಡಿತದಲ್ಲಿ ಏರುಪೇರಾಗಿದ್ದು, ಕುಟುಂಬಸ್ಥರು ಕೂಡಲೇ ಮಹಾರಾಷ್ಟ್ರದ ಉದಗೀರನಲ್ಲಿ‌ ಪ್ರಥಮ ಚಿಕಿತ್ಸೆ ಕೊಡಿಸಿ ಮುಂಬೈನ ಬಾಂದ್ರಾದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈಗ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎರಡು ವರ್ಷಗಳ ಹಿಂದೆಯೂ ಶಾಸಕ ಚವ್ಹಾಣ ಅವರಿಗೆ ಇದೇ ರೀತಿ ಎದೆಬಡಿತದಲ್ಲಿ ಏರುಪೇರಾಗಿತ್ತು.ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು.

Related Post