ಕಲಬುರಗಿ : ವಿಕಲಚೇತನ ಮಗಳನ್ನ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ತಂದೆಯನ್ನು ಪೊಲೀಸರು ಅರೆಸ್ಟ್ ಮಾಡಿರುವಂತಹ ಘಟನೆ ಕಲಬುರಗಿ ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ನಡೆದಿದೆ.
ಮಂಜುಳಾ (17) ಕೊಲೆಯಾದ ಮಗಳು. ಗುಂಡೆರಾವ್ ನೀಲೂರ ಕೊಲೆ ಮಾಡಿದ ತಂದೆ. ಸಬ್ ಅರ್ಬನ್ ಪೊಲೀಸರ ತನಿಖೆ ವೇಳೆ ಆತ್ಮಹತ್ಯೆಯಲ್ಲ ಕೊಲೆ ಎನ್ನುವುದು ಬೆಳಕಿಗೆ ಬಂದಿದೆ.
ನಡೆದದ್ದೇನು?
ಜಮೀನು ವ್ಯಾಜ್ಯದ ವಿಚಾರದಲ್ಲಿ ಪಕ್ಕದ ಜಮೀನಿನವರ ಕಾಟ ಹಿನ್ನೆಲೆ ಅವರನ್ನು ಜೈಲಿಗೆ ಕಳಿಸಬೇಕು ಅಂತ ತಂದೆ ಗುಂಡೆರಾವ್ ನೀಲೂರ ಸ್ವಂತ ತಮ್ಮ ಮಗಳನ್ನೇ ನೇಣು ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಪಕ್ಕದ ಜಮೀನಿನವರ ಹೆಸರು ಡೆತ್ನೋಟ್ನಲ್ಲಿ ಬರೆದು ಮಗಳ ಕೈಯಲ್ಲಿಟ್ಟು ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾಗಿದ್ದಾರೆ. ಆದರೆ ಅನುಮಾನಗೊಂಡು ವಿಚಾರಣೆ ಮಾಡಿದ ಪೊಲೀಸರು ಈ ವೇಳೆ ಆತ್ಮಹತ್ಯೆಯಲ್ಲ ಕೊಲೆ ಅನ್ನೋದು ಬೆಳಕಿಗೆ ಬಂದಿದೆ.
