Trending

ವರ್ಕ್‌ಔಟ್‌ ಆಗಿಲ್ಲ ಪ್ರಶಾಂತ್‌ ಕಿಶೋರ್‌ ಮ್ಯಾಜಿಕ್‌ : ಚುನಾವಣಾ ಚಾಣಕ್ಯ ಫ್ಲಾಪ್‌ ಆಗಿದ್ದೇಗೆ?

Spread the love

ಪಟನಾ: ಬಿಹಾರದಲ್ಲಿ ನಡೆದ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಎನ್‌ಡಿಎ (NDA) ಭರ್ಜರಿ ಗೆಲುವನ್ನು ಕಾಣುವ ನಿರೀಕ್ಷೆ ಹೆಚ್ಚಿದೆ. ಬಿಹಾರದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಪ್ರಶಾಂತ್‌ ಕಿಶೋರ್‌ ಅವರ ಯಾವುದೇ ಟ್ರಿಕ್‌ ಫಲ ಕೊಟ್ಟಿಲ್ಲ.

ಪ್ರಶಾಂತ್‌ ಕಿಶೋರ್‌ ಅವರು ಚುನಾವಣೆಗೆ ಸ್ಪರ್ಧೆ ಮಾಡದೇ ಇದ್ದರೂ 240 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಆದರೆ ಒಂದು ಕಡೆಯೂ ಗೆಲುವನ್ನು ಸಾಧಿಸದೆ ಸೊನ್ನೆ ಸುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆ 2025ರಲ್ಲಿ ಪ್ರಶಾಂತ್ ಕಿಶೋರ್ ಅವರ ಪಕ್ಷ ‘ಜನ ಸುರಾಜ್ ಪಾರ್ಟಿ ಕಮಾಲ್‌ ಮಾಡಬಹುದು ಎಂದು ಊಹಿಸಿದ್ದು ಸುಳ್ಳಾಗಿದೆ.

ಸಮೀಕ್ಷೆಗಳಲ್ಲಿ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಾರ್ಟಿ ಬಿಹಾರದ 243 ಸ್ಥಾನಗಳಲ್ಲಿ 5 ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಇದೀಗ ಅದು ಸಂಪೂರ್ಣ ಹುಸಿಯಾಗಿದೆ.

ಚುನಾವಣಾ ಚಾಣಕ್ಯ ಎಂದು ಹೆಸರುವಾಸಿಯಾಗಿದ್ದ ಪ್ರಶಾಂತ್‌ ಈ ಮೊದಲು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದರು. 2012 ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಯಶಸ್ವಿ ಪ್ರಚಾರಕ್ಕಾಗಿ ಭಾಗವಹಿಸುವುದರೊಂದಿಗೆ ಕಿಶೋರ್ ಅವರ ರಾಜಕೀಯ ಪ್ರವೇಶ ಪ್ರಾರಂಭವಾಯಿತು.

ಮೂರು ವರ್ಷಗಳ ಬಳಿಕ 2024 ರಲ್ಲಿ ಬಿಹಾರಕ್ಕೆ ಮರಳಿದ ಪ್ರಶಾಂತ್‌ ಅಧಿಕೃತವಾಗಿ ಜನ್ ಸುರಾಜ್ ಪಕ್ಷವನ್ನು ಪ್ರಾರಂಭಿಸಿದರು. ಈ ಬಿಹಾರ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರ ಮಾತುಗಳು, ರಾಜ್ಯದ ಸಮಸ್ಯೆಗಳನ್ನು ಎತ್ತಿ ತೋರಿಸಿದ ಬಗೆ ಜನರನ್ನು ಸೆಳೆಯಿತಾದರೂ ಸಹ ಜನ ಅವರತ್ತ ಒಲವು ತೋರಿಲ್ಲ. ಬಿಹಾರದಲ್ಲಿ ಉದ್ಯೋಗ ಮತ್ತು ವಲಸೆಯ ವಿಷಯವನ್ನು ಮುಖ್ಯ ಭೂಮಿಕೆಗೆ ತಂದ ಅವರು ಪಾದ ಯಾತ್ರೆಗಳನ್ನು ಕೈಗೊಂಡಿದ್ದರು. ಆದರೆ ಅದ್ಯಾವುದಕ್ಕೂ ಬಿಹಾರದ ಜನರು ಒತ್ತು ನೀಡಿಲ್ಲ ಎಂದು ಈ ಬಾರಿಯ ಫಲಿತಾಂಶ ಹೇಳುತ್ತದೆ.

[pj-news-ticker]