Trending

ಗುರ್ಲಾಪುರದಲ್ಲಿ ವಿಜಯೇಂದ್ರನ ಬರ್ತ್​ಡೇ ಮಾಡಿದ್ರು, ನನ್ನನ್ನು ಹೆಣ ಮಾಡಿದ್ರಿ : ಸಚಿವ ಶಿವಾನಂದ ಪಾಟೀಲ್ ಬೇಸರ

Spread the love

ಚಿಕ್ಕೋಡಿ: “ನೀವು ಹತ್ತು ದಿನಗಳಲ್ಲಿ ನನ್ನನ್ನು ಹೆದರಿಸಿದ್ರಿ. ನಮ್ಮ ಜನ ಅಂತ ನಾನು ತಿಳಿದಿದ್ದೆ, ಆದರೆ ನೀವು ನನ್ನನ್ನು ಹೆಣ ಮಾಡಿದ್ರಿ. ನೀವು ನನ್ನನ್ನು ಹೆಣ ಮಾಡದೇ ಇರುತ್ತಿದ್ದರೆ, ಸರ್ಕಾರವೂ ಎಚ್ಚೆತ್ತುಕೊಳ್ಳುತ್ತಿರಲಿಲ್ಲ. ವಿಜಯೇಂದ್ರ ಇಲ್ಲಿ ಹುಟ್ಟುಹಬ್ಬ ಮಾಡಿದ್ರು, ನನ್ನನ್ನು ಇಲ್ಲಿ ಹೆಣ ಮಾಡಿದ್ರಿ. ನೋಡಿ ವಿಜಯೇಂದ್ರ ಹಣೆಬರಹ ಹೇಗಿದೆ” ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರಿಗೆ ಕಬ್ಬಿಗೆ ದರವನ್ನು ನಿಗದಿ ಮಾಡಿರುವ ಸರ್ಕಾರ ಆದೇಶ ಪತ್ರವನ್ನು ನೀಡಿದ ಸಂದರ್ಶನದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು.

ಡಿಸಿ, ಎಸ್ಪಿ ಇರದೇ ಇದ್ದರೆ ನಾನು ವೇದಿಕೆ ಮುಟ್ಟುತ್ತಿರಲಿಲ್ಲ. ನೀವು‌ ಹೋಗಬೇಡಿ ಎಂದು ನನಗೆ ಕೆಲವರು ಹೇಳಿದರು. ನಿಮ್ಮ ವೀರಾವೇಶ ನೋಡಿ ನಾನು ಗಾಬರಿಯಾಗಿದ್ದೆ. ರೈತರ ತಾಳ್ಮೆಯನ್ನು ನಾವು ಪರೀಕ್ಷೆ ಮಾಡಬಾರದು. ಇದು ಹೋರಾಟ ಅಲ್ಲ, ಆಂದೋಲನ ಆಗಿ ಪರಿವರ್ತನೆ ಆಯಿತು. ಒಂದು ದಿನ ಬಿಡುತ್ತಿದ್ದರೆ, ಇಡೀ ದೇಶವೇ ಕಿತ್ತುಹೋಗುತ್ತೆ ಎಂದು ಗೊತ್ತಾಯಿತು. ಕೇಂದ್ರ, ರಾಜ್ಯ ಸರ್ಕಾರ ಮಾಡಬೇಕಿದ್ದ ಕೆಲಸದ ಬಗ್ಗೆ ‌ಅನೇಕರು ಹೇಳಿದ್ದಾರೆ. ಬೆಳಗಾವಿ ಹೋರಾಟ ನೋಡಿ ರಾಜ್ಯದ ಅನೇಕರು ಹೆದರಿ ಕುಳಿತಿದ್ದರು. ಇದು ನೀಜವಾದ ಹೋರಾಟ ಎಂದು ಹೋರಾಟಗಾರನ್ನು ಪ್ರಶಂಶಿಸಿದರು.

ಇಂತಹ ಹೋರಾಟ ನನ್ನ ಅವಧಿಯಲ್ಲಿ ನೋಡಿದ್ದು ಮೊದಲು. ಕೊನೆ ಆಗಬಾರದು. ಬಾಟಲಿ, ಚಪ್ಪಲಿ ಎಸೆದರೂ ನಡೆಯುತ್ತೆ‌, ನನ್ನನ್ನು ಜೀವಂತ ಬಿಟ್ಟಿರಿ ಅದೇ ದೊಡ್ಡದು‌ ಎಂದು ಮಾರ್ಮಿಕವಾಗಿ ಹೇಳಿದರು.

[pj-news-ticker]