Trending

ಮಳೆಗೆ ಆಹುತಿಯಾದ ಅಂತಿಮ ಪಂದ್ಯ : 2-1ರಿಂದ ಸರಣಿ ಗೆದ್ದ ಭಾರತ

Spread the love

ಬ್ರಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಇಲ್ಲಿ ನಡೆದ ಅಂತಿಮ ಟಿ20 ಅಂತರರಾಷ್ಟ್ರೀಯ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು. ಆ ಮೂಲಕ ಭಾರತ 2-1ರಿಂದ ಸರಣಿ ವಶಪಡಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು.

ಆರಂಭಿಕರಾದ ಶುಭಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ 4.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿದ್ದರು.

ಆ ವೇಳೆ ಮೈದಾನದಲ್ಲಿ ಮಳೆ ಆರಂಭಗೊಂಡಿತು. ಮಳೆ ನಿಲ್ಲದ ಹಿನ್ನೆಲೆ ಅಂಪೈರ್‌ಗಳು ರದ್ದು ಮಾಡಲು ನಿರ್ಧರಿಸಿದರು. ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಅಭಿಷೇಕ್ ಶರ್ಮ ಸರಣಿ ಶ್ರೇಷ್ಠ ಪ್ರಶಸ್ತಿ ಪಡದುಕೊಂಡರು.

[pj-news-ticker]