ಭದ್ರಾವತಿ: ತನ್ನ ಮಾಲಿಕನ ಸಾವಿಗೆ ಮರುಗಿದ ನಾಯಿಯೊಂದು ತಾನೂ ಆತನ ಶವದ ಪಕ್ಕದಲ್ಲೇ ಕೊನೆಯುಸಿರೆಳೆದ ಘಟನೆ ನಗರದ ಹುತ್ತಾ ಕಾಲೋನಿಯ ಜಿಂಕ್ಲೈನ್ ಬಡಾವಣೆಯಲ್ಲಿ ನಡೆದಿದೆ.
ಕಾಲೋನಿಯಲ್ಲಿ ಪೇಂಟರ್ ವೃತ್ತಿ ಮಾಡುತ್ತಿದ್ದ ಲಾರೆನ್ಸ್ (61) ಮಿದುಳು ಸಂಬಂಧಿತ ಕಾಯಿಲೆಯಿಂದ ನರಳುತ್ತಿದ್ದು 5 ದಿನಗಳ ಹಿಂದೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಅವರ ಮೃತದೇಹವನ್ನು ಅವರ ಮನೆಗೆ ತರುತ್ತಿದ್ದಂತೆ ಮನೆಯಲ್ಲಿದ್ದ ಸಾಕು ನಾಯಿ ಲಾರೆನ್ಸ್ ಮೃತದೇಹದ ಪಕ್ಕದಲ್ಲೇ ಮಲಗಿಕೊಂಡು ಕಣ್ಣೀರು ಹಾಕುತ್ತ ಮೃತಪಟ್ಟಿದೆ.
ಕುಟುಂಬದವರು ಲಾರೆನ್ಸ್ ಅಂತ್ಯಸಂಸ್ಕಾರ ನಡೆಸಿ, ನಾಯಿಯ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.
