Trending

ತೀರ್ಥಹಳ್ಳಿ : ಬೊಲೆರೋ- ಬೈಕ್ ಅಪಘಾತ : ಓರ್ವ ಸ್ಥಳದಲ್ಲೇ ಸಾವು

Spread the love

ತೀರ್ಥಹಳ್ಳಿ : ಬೊಲೆರೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಟ್ಟಣದ ಬಾಳೆಬೈಲ ಸಮೀಪ  ಮಂಗಳವಾರ ನಡೆದಿದೆ.

ಹುಂಚದಕಟ್ಟೆಯ ನಿಟ್ಟೂರು ಸಮೀಪದ ನಿವಾಸಿ ಚರಣ್ (23) ಸ್ಥಳದಲ್ಲೇ ಮೃತಪಟ್ಟ ಯುವಕ.

ಮಂಗಳವಾರ ಸಂಜೆ ಬಾಳೆಬೈಲು ಸಮೀಪ ಈ ಘಟನೆ ನಡೆದಿದ್ದು, ಯುವಕ ತನ್ನ ಮನೆಗೆ ವಾಪಸ್‌ ಹೋಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ.

ಅಪಘಾತ ಸಂಭವಿಸಿದ ತಕ್ಷಣ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಆದರೆ ಆತ ಸ್ಥಳದಲ್ಲೇ ಅಸುನೀಗಿದ್ದಾನೆ ಎಂಬ ಮಾಹಿತಿ ವೈದ್ಯರಿಂದ ಲಭ್ಯವಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

[pj-news-ticker]