ನವದೆಹಲಿ: ದಲಿತರು, ಅಂಚಿನಲ್ಲಿರುವ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದೌರ್ಜನ್ಯ ತಡೆಯಲು ಹಾಗೂ ಭಾರತದ ಮುಖ್ಯ ನ್ಯಾಯಾಧೀಶರ ಮೇಲಿನ ಇತ್ತೀಚಿನ ನಡೆದ ದಾಳಿಯನ್ನು ವಿರೋಧಿಸಿ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಬುಧವಾರ ಐ ಲವ್ ಅಂಬೇಡ್ಕರ್ ಅಭಿಯಾನವನ್ನು ಆರಂಭಿಸಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ ಭಾರತ ನಡೆಯುತ್ತಿದೆ ಹೊರತು ಬಿಜೆಪಿ-ಆರ್‌ಎಸ್‌ಎಸ್‌ನ ದ್ವೇಷಪೂರಿತ ಚಿಂತನೆಗಳಿಂದಲ್ಲ. ಬೆಲೆ ತೆತ್ತಾದರೂ ನಾವು ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಐವೈಸಿ ತಿಳಿಸಿದೆ. ಬಿಜೆಪಿ ಅಧಿಕಾರದಲ್ಲಿ ಸಂವಿಧಾನದ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ ಎಂದು ಹೇಳಿದೆ.
