ಕರೂರು: ತಮಿಳುನಾಡಿನ ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ , ಖ್ಯಾತ ನಟ ದಳಪತಿ ವಿಜಯ್ ಅವರ ಪ್ರಚಾರ ರ್ಯಾಲಿಯಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿದೆ. ಭಾರಿ ಆತಂಕದ ವಾತಾವರಣದಲ್ಲಿ ವಿಜಯ್ ಅವರು ಭಾಷಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು, ಹಲವಾರು ಜನರು ತೀವ್ರ ಜನದಟ್ಟಣೆಯ ನಡುವೆ ಮೂರ್ಛೆ ಹೋದ ಬಗ್ಗೆ ವರದಿಯಾಗಿದೆ.
ಪಕ್ಷದ ಕಾರ್ಯಕರ್ತರು, ಮಕ್ಕಳು ಜನಸಂದಣಿ ಹೆಚ್ಚುತ್ತಾ ಹೋದಂತೆ ಒತ್ತಡದಿಂದಾಗಿ ಮೂರ್ಛೆ ಹೋದರು ಎಂದು ವರದಿಯಾಗಿದೆ, ಇದರಿಂದಾಗಿ ವಿಜಯ್ ತಮ್ಮ ಭಾಷಣವನ್ನು ನಿಲ್ಲಿಸಿ ಶಾಂತವಾಗಿರಲು ಕರೆ ನೀಡಿದರು. ಅಗತ್ಯವಿರುವವರನ್ನು ತಲುಪಲು ತುರ್ತು ಆಂಬ್ಯುಲೆನ್ಸ್ಗಳಿಗೆ ದಾರಿ ಮಾಡಿಕೊಡುವಂತೆ ತಮ್ಮ ಬೆಂಬಲಿಗರನ್ನು ಒತ್ತಾಯಿಸಿದರು.
ಅಸ್ವಸ್ಥರಾದವರಿಗೆ ನೀರಿನ ಬಾಟಲಿಗಳನ್ನು ವಿತರಿಸಲಾಗಿದ್ದು ವೈದ್ಯಕೀಯ ತಂಡಗಳನ್ನು ತತ್ ಕ್ಷಣವೇ ನಿಯೋಜಿಸಲಾಗಿದೆ. ಹಲವಾರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿರುವ ಬಗ್ಗೆ ವರದಿಯಾಗಿದೆ.
