ಮಹದೇವಪುರ: ಬ್ರಹ್ಮಾಂಡ ಗುರೂಜಿ ಅಂಗವಿಕಲರಿಗೆ, ಕುರೂಪಿಗಳಿಗೆ ಹಾಗೂ ಭಿಕ್ಷುಕರಿಗೆ ಅವಮಾನಿಸಿದ್ದಾರೆಂದು ವಿಕಲಚೇತನರೋಬ್ಬರು ಕಾಡುಗುಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸೆ.21 ರಂದು ಖಾಸಗಿ ಚಾನಲ್ ಒಂದರಲ್ಲಿ ಬ್ರಹ್ಮಾಂಡ ಗುರೂಜಿ ಎಂದೇ ಪ್ರಸಿದ್ದರಾಗಿರುವ ನರೇಂದ್ರ ಬಾಬು ಶರ್ಮಾ ಜೋತಿಷ್ಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ವೇಳೆ ಮಹಾಲಯ ಅಮಾವಾಸ್ಯೆ ಪಿತೃಪಕ್ಷದಲ್ಲಿ ಮಾಡಬೇಕಾದ ವಿಧಿವಿಧಾನಗಳ ಬಗ್ಗೆ ವಿವರಣೆ ನೀಡುತ್ತಾ, ಮೃತಪಟ್ಟವರಿಗೆ ಇಡುವ ಎಡೆಯನ್ನು ಮನೆಯವರು ಅಥವಾ ಬೇರೆಯವರು ತಿನ್ನ ಬಾರದು. ಅದನ್ನು ಕುರೂಪಿಗಳಿಗೆ, ಭಿಕ್ಷುಕರಿಗೆ ಹಾಗೂ ಅಂಗವಿಕಲರಿಗೆ ನೀಡಬೇಕೆಂದು ಸಲಹೆ ನೀಡಿದ್ದಾರೆ.
ಇದ್ದರಿಂದ ಬೇಸತ್ತು ವಿಕಲ ಚೇತನ ಹರೀಶ್ ಎಂಬುವರು.ಬ್ರಹ್ಮಾಂಡ ಗೂರುಜಿ ಅಲಿಯಾಸ್ ನರೇಂದ್ರ ಬಾಬು ಶರ್ಮಾ ಹಾಗೂ ಖಾಸಗಿ ಚಾನಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಉತ್ತಮ ಸಂದೇಶಗಳನ್ನು ನೀಡಬೇಕಾದ ಗುರೂಜಿಗಳು ಮೌಢ್ಯತೆ ಬಿತ್ತಿ ಸಮಾಜದಲ್ಲಿ ಶಾಂತಿ ಹಾಳುಮಾಡುತ್ತಿದ್ದಾರೆ, ಹುಟ್ಟಿನಿಂದ ನಾನು ಅಂಗವೈಕಲ್ಯಕ್ಕೆ ತುತ್ತಾಗಿದ್ದೇನೆ. ಅದರೂ ಸ್ವಯಂಪ್ರೇರಿತವಾಗಿ ಜೀವನ ಮಾಡುತ್ತಿದ್ದೆವೆ ,ಮೃತಪಟ್ಟವರಿಗೆ ಇಡುವ ಪಿಂಡವನ್ನು ನಮ್ಮಂಥವರಿಗೆ ನೀಡಿ ಎಂದು ಹೇಳುವುದು ಖಂಡನೀಯ ಎಂದು ವಿಶೇಷ ಚೇತನ ಹರೀಶ್ ಬೇಸರ ವ್ಯಕ್ತಪಡಿಸಿದರು.
ಹರೀಶ್ ನೀಡಿರುವ ದೂರಿನ ಆಧಾರದ ಮೇರೆಗೆ ಎನ್ಸಿಆರ್ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ನರೇಂದ್ರ ಬಾಬು ಹಾಗೂ ಖಾಸಗಿ ಚಾನಲ್ ಗೆ ನೋಟಿಸ್ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
