Trending

ಶಿವಮೊಗ್ಗ : ಜೈಲು ಸೇರಿದ್ದ ಮೂರೇ ದಿನಕ್ಕೆ ಮೃತಪಟ್ಟ ವಿಚಾರಣಾಧೀನ ಖೈದಿ

Spread the love

ಶಿವಮೊಗ್ಗ: ವಿಚಾರಣಾಧೀನ ಖೈದಿಯಾಗಿ ಶಿವಮೊಗ್ಗ ಜೈಲು ಸೇರಿದ್ದ ವ್ಯಕ್ತಿಯೊಬ್ಬ ಮೂರೇ ದಿನಕ್ಕೆ ಮೃತಪಟ್ಟಿದ್ದಾನೆ.

ಶಿವಮೊಗ್ಗ ಟಿಪ್ಪುನಗರದ ನಿವಾಸಿ ಮನ್ಸೂರ್ (43) ಮೃತ ವಿಚಾರಣಾಧೀನ ಖೈದಿ. ಸೆ.15ರಂದು ಮನ್ಸೂರ್ ಶಿವಮೊಗ್ಗ ಜೈಲು ಸೇರಿದ್ದ. ಅನಾರೋಗ್ಯದ ಹಿನ್ನೆಲೆ ಸೆ.17ರ ಮಧ್ಯರಾತ್ರಿ ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾನೆ ಎಂದು ಕಾರಾಗೃಹದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.14ರಂದು ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ತಂದೆಯ ಜತೆ ಗಲಾಟೆ ಮಾಡಿದ್ದ. ಕತ್ತರಿಯಿಂದ ತಂದೆಯ ಎದೆ, ಕುತ್ತಿಗೆ ಸೇರಿದಂತೆ ಹಲವೆಡೆ ಮಾರಣಾಂತಿಕವಾಗಿ ಚುಚ್ಚಿದ್ದ. ಈ ಹಿನ್ನೆಲೆ ಶಿವಮೊಗ್ಗದ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತನನ್ನು ಬಂಧಿಸಿದ್ದ ಪೊಲೀಸರು ಶಿವಮೊಗ್ಗ ಜೈಲಿಗೆ ರವಾನಿಸಿದ್ದರು.

[pj-news-ticker]