Trending

ಶಿವಮೊಗ್ಗ: ವಿದ್ಯಾನಗರದ ಮನೆಯೊಂದಕ್ಕೆ ನುಗ್ಗಿ ಚಿನ್ನ- ನಗದು ದೋಚಿದ ‌ಕಳ್ಳರ ಗ್ಯಾಂಗ್

Spread the love

ಶಿವಮೊಗ್ಗ: ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾನಗರದ ಚಾನಲ್ ಏರಿ ರಸ್ತೆಯ ಮನೆಯೊಂದಕ್ಕೆ ಐವರು ಕಳ್ಳರ ಗ್ಯಾಂಗ್ ನುಗ್ಗಿ ಚಿನ್ನ, ನಗದು ದರೋಡೆ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಐವರು ಕಳ್ಳರು ಚಡ್ಡಿ, ಸೊಂಟಕ್ಕೆ ಟವಲ್ ಕಟ್ಟಿಕೊಂಡು ಬಂದಿದ್ದು, ಮತ್ತೆ ಚಡ್ಡಿ ಗ್ಯಾಂಗ್ ಆಕ್ಟಿವ್ ಆಗಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.

ಚಾನಲ್ ರಸ್ತೆಯಲ್ಲಿರುವ ಜಾನ್ ಎಂಬವರ ಮನೆಗೆ 5 ಮಂದಿಯ ತಂಡ ಬಂದಿದ್ದು ಕಿಟಿಕಿಯ ಸರಳು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಕೇವಲ ಒಂದು ಕೋಣೆಯಲ್ಲಿ ಸಂಪೂರ್ಣ ತಲಾಶ್ ನಡೆಸಿದ್ದಾರೆ. ಜಾನ್ ಕುಟುಂಬ ಮಲಗಿದ್ದ ಕೋಣೆಗೆ ಪ್ರವೇಶಿಸಿಲ್ಲ.

ಸೆ.17ರ ಬುಧವಾರ ರಾತ್ರಿ 2.25 ಗಂಟೆಯಿಂದ 3.48 ರವರೆಗೆ ಚಡ್ಡಿಗ್ಯಾಂಗ್ ಜಾನ್ ಮನೆಯ ಕೋಣೆಯಲ್ಲಿ ಶೋಧ ನಡೆಸಿರುವುದು ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಬೆಳಿಗ್ಗೆ ಎದ್ದಾಗಲೇ ಜಾನ್ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ನಗದು ಬಂಗಾರ ಕಳುವಾಗಿರುವ ಬಗ್ಗೆ ಜಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

[pj-news-ticker]