Trending

ನಟಿ ಭಾವನಾ ರಾಮಣ್ಣಗೆ ಹೆರಿಗೆ : ಅವಳಿ ಮಕ್ಕಳಲ್ಲಿ ಒಂದು ಮಗು ನಿಧನ

Spread the love

ಬೆಂಗಳೂರು: ಖ್ಯಾತ ನಟಿ, ರಾಜಕಾರಣಿ, ಡ್ಯಾನ್ಸರ್ ಭಾವನಾ ರಾಮಣ್ಣ ಅವರು ಮದುವೆಯಾಗದೆ, 40ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾರೆ. ಭಾವನಾ ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಲು ಸಜ್ಜಾಗಿದ್ದರು. ಸದ್ಯ ಎಂಟನೇ ತಿಂಗಳಿನಲ್ಲಿರುವ ನಟಿಗೆ ಈಗಲೇ ಹೆರಿಗೆ ಮಾಡಿಸಲಾಗಿದೆ.

ವೈದ್ಯರ ಸಲಹೆ ಮೂಲಕ ಎರಡು ವಾರಗಳ ಹಿಂದೆಯೇ ಹೆರಿಗೆ ಮಾಡಿಸಲಾಗಿದೆ. ಆದರೆ ದುರಾದೃಷ್ಟವಶತ್‌ ಇಬ್ಬರು ಮಕ್ಕಳ ಪೈಕಿ ಒಂದು ಮಗು ಸಾವನ್ನಪ್ಪಿದೆ. ಇನ್ನೊಂದು ಹೆಣ್ಣು ಮಗು ಬದುಕುಳಿದಿದ್ದು, ತಾಯಿ ಹಾಗೂ ಶಿಶು ಕ್ಷೇಮವಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಇತ್ತೀಚೆಗಷ್ಟೇ ಭಾವನಾ ಸೀಮಂತ ಮಾಡಿಕೊಂಡಿದ್ದರು. ಆದರೆ ಏಳನೇ ತಿಂಗಳಿನಲ್ಲಿರುವಾಗ ನಟಿಗೆ ಕೆಲವು ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ವೈದ್ಯರು ಎಂಟನೇ ತಿಂಗಳಿಗೆ ಹೆರಿಗೆ ಮಾಡಿಸುವ ಸೂಚನೆ ನೀಡಿದ್ದರು. ಎರಡು ವಾರಗಳ ಹಿಂದೆ ಹೆರಿಗೆ ಮಾಡಿಸಲಾಗಿತ್ತು. ಆದರೆ ಒಂದು ಮಗು ಮೃತಪಟ್ಟಿದೆ.

ಭಾವನಾ ಅವರ ಸೀಮಂತ ಶಾಸ್ತ್ರದ ವಿಡಿಯೋ ವೈರಲ್‌ ಆಗಿತ್ತು. ಸರಳವಾಗಿ ನಡೆದರೂ ಸಂಪ್ರದಾಯದ ಪ್ರಕಾರ ಸೀಮಂತ ನಡೆದಿತ್ತು. ಚಿತ್ರರಂಗದ ಸ್ನೇಹಿತೆಯರು ಹಾಗೂ ಆಪ್ತರು ಭಾಗವಹಿಸಿ ಶುಭ ಕೋರಿದ್ದರು.

[pj-news-ticker]