ತಿರುವನಂತಪುರಂ: ‘ಮಿದುಳು ತಿನ್ನುವ ಅಮೀಬಾ’ (ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್) ಸೋಂಕಿಗೆ ತುತ್ತಾಗಿ, ಕೋಯಿಕ್ಕೋಡ್‌ನ ವೈದ್ಯಕೀಯ ಕಾಲೇಜು-ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 3 ತಿಂಗಳ ಹಸುಗೂಸು ಹಾಗೂ ಮತ್ತೊಬ್ಬ ರೋಗಿ ಸಾವಿಗೀಡಾಗಿದ್ದಾರೆ.
ಓಮಶ್ಶೇರಿ ನಿವಾಸಿ ಅಬೂಬಕರ್ ಸಿದ್ದಿಕಿ ಅವರ ಮಗು ಸೋಮವಾರ ಮೃತಪಟ್ಟಿದ್ದು, ಕಾಪ್ಪಿಲ್‌ನ ನಿವಾಸಿ ರಾಮ್ಲಾ ಅವರು ಭಾನುವಾರ ಮೃತಪಟ್ಟಿದ್ದಾರೆ.
ಈ ವರ್ಷ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
42 ಮಂದಿಗೆ ಈ ವರ್ಷ ಸೋಂಕು ದೃಢಪಟ್ಟಿದ್ದು, ಇನ್ನೂ 13 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಅಪರೂಪದ ಸೋಂಕು ಆಗಿದ್ದು, ಇದು ಕಲುಷಿತ ನೀರಿನ ಹರಡುತ್ತದೆ.
