Trending

ಜೋಗಗುಂಡಿಗೆ ಬಿದ್ದು ಸಾಯಲು ಬಂದವನ ಮನಃಪರಿವರ್ತಿಸಿ ಊರಿಗೆ ಕಳಿಸಿದ ಎಸ್ಐ

Spread the love

ಶಿವಮೊಗ್ಗ: ಜೋಗ್ ಫಾಲ್ಸ್ ನಲ್ಲಿ ಜಿಗಿದು ಆತ್ಮಹ*ತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಾಪಾರಿಯೊಬ್ಬರಿಗೆ ಕಾರ್ಗಲ್ ಸಬ್ ಇನ್ಸ್ ಪೆಕ್ಟರ್ ಬುದ್ಧಿ ಹೇಳಿ ಆತ್ಮಹತ್ಯೆ ನಿರ್ಧಾರ ಬದಲಿಸುವಂತೆ ಮಾಡಿ ಆತನ ಊರಿಗೆ ಕಳುಹಿಸಿದ ಘಟನೆ ಜೋಗದಲ್ಲಿ ನಡೆದಿರುವ ಬಗ್ಗೆ ಆ.28ರ ಗುರುವಾರ ವರದಿಯಾಗಿದೆ.

ಸಬ್ ಇನ್ಸ್ ಪೆಕ್ಟರ್ ನಾಗರಾಜ್ ಆತ್ಮಹತ್ಯೆಯಿಂದ ವ್ಯಕ್ತಿಯನ್ನು ಪಾರು ಮಾಡಿದವರು.

ಸಬ್ ಇನ್ಸ್ ಪೆಕ್ಟರ್ ನಾಗರಾಜ್ ಅವರು ಜೋಗ ಫಾಲ್ಸ್ ನಲ್ಲಿ ರೌಂಡ್ಸ್ ನಲ್ಲಿದ್ದಾಗ ಒಬ್ಬ ವ್ಯಕ್ತಿ ಜೋಗ್ ಫಾಲ್ಸ್ ನಲ್ಲಿರುವ ಅತಿ ಅಪಾಯಕಾರಿ ಸ್ಥಳಗಳ ಬಗ್ಗೆ ಅಲ್ಲಿನ ಆಟೋ ಚಾಲಕರಲ್ಲಿ ವಿಚಾರಿಸಿದ್ದರ ಬಗ್ಗೆ ಮಾಹಿತಿ ಪಡೆದಿದ್ದರು. ಆತನ ಬಗ್ಗೆ ಅನುಮಾನ ಬಂದು, ವಿಚಾರಿಸಲಾಗಿದ್ದು, ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಎನ್ನುವುದು ಗೊತ್ತಾಗಿದೆ.

ವ್ಯಾಪಾರದಲ್ಲಿ ನಷ್ಟವಾಗಿದೆ, ತನ್ನ ಪೋಷಕರ ಆರೋಗ್ಯದಲ್ಲಿ ಸಮಸ್ಯೆ ಇದೆ. ಈ ಕಾರಣ ಲಕ್ಷಗಟ್ಟಲೆ ಸಾಲ ಮಾಡಿ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದೇನೆ. ಬೇಜಾರಾಗಿ ಸುಮಾರು 20 ದಿನದ ಹಿಂದೆ ಮನೆ ಬಿಟ್ಟು ಹೊರಗಡೆ ಬಸ್ ಸ್ಟ್ಯಾಂಡ್‌, ರೈಲ್ವೆ ಸ್ಟೇಷನ್ ಬೇರೆ ಬೇರೆ ಸ್ಥಳಗಳಲ್ಲಿ ವಾಸ್ತವ ಮಾಡಿ ನಂತರ ಸಾಯುವ ನಿರ್ಧಾರ ತೆಗೆದುಕೊಂಡಿದ್ದಾಗಿ ವಿವರಿಸಿದ್ದನು.

ಜೋಗ್ ಫಾಲ್ಸ್ ಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಬಂದಿದ್ದಾಗಿ ‌ಮಾಹಿತಿ‌ ನೀಡಿದ್ದನು.

ನಂತರ ಆತನಿಗೆ ಧೈರ್ಯ ತುಂಬಿ ಮನವೊಲಿಸಿದ ಸಬ್ ಇನ್ಸ್ ಪೆಕ್ಟರ್ ಅವರ ಪೋಷಕರನ್ನು ಫೋನ್ ಮುಖಾಂತರ ಸಂಪರ್ಕಿಸಿ,  ವಾಪಸ್ ಬೆಂಗಳೂರಿನ ಅವನ ಮನೆಗೆ ಕಳಿಸಿ ಕೊಟ್ಟಿದ್ದಾರೆ.

[pj-news-ticker]