Trending

ಟಿಫಿನ್ ಬಾಕ್ಸ್‌ನಲ್ಲಿ ಬಂದೂಕು ತಂದು ಶಿಕ್ಷಕನ ಮೇಲೆ ಗುಂಡಿನ ದಾಳಿ ನಡೆಸಿದ ವಿದ್ಯಾರ್ಥಿ

Spread the love

ಡೆಹ್ರಾಡೂನ್: ತರಗತಿ ನಡೆಯುತ್ತಿರುವ ವೇಳೆಯೇ ವಿದ್ಯಾರ್ಥಿಯೊಬ್ಬ ಶಿಕ್ಷಕನ ಮೇಲೆ ಗುಂಡು ಹಾರಿಸಿರುವ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ಬುಧವಾರ (ಆ.20) ನಡೆದಿದೆ.

ಇಲ್ಲಿನ ಖಾಸಗಿ ಶಾಲೆಯ ಭೌತಶಾಸ್ತ್ರ ಅಧ್ಯಾಪಕರಾಗಿರುವ ಗಂಗನ್‌ದೀಪ್ ಸಿಂಗ್ ಕೊಹ್ಲಿ ಗುಂಡಿನ ದಾಳಿಗೆ ಒಳಗಾಗಿರುವ ಅಧ್ಯಾಪಕ.

ಏನಿದು ಪ್ರಕರಣ:
ಇಲ್ಲಿನ ಖಾಸಗಿ ಶಾಲೆಯ ಭೌತಶಾಸ್ತ್ರ ಅಧ್ಯಾಪಕರಾಗಿದ್ದ ಗಂಗದೀಪ್ ಸಿಂಗ್ ಅವರು ಈ ವಾರದ ಆರಂಭದಲ್ಲಿ ತಮ್ಮ ತರಗತಿಯಲ್ಲಿ ಇತರ ಸಹಪಾಠಿಗಳ ಸಮ್ಮುಖದಲ್ಲಿ ಸಮರತ್ ಬಾಜ್ವಾ ಎಂಬ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ್ದರು ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿ ಬುಧವಾರ ಶಾಲೆಗೆ ತೆರಳುವ ವೇಳೆ ಟಿಫನ್ ಬಾಕ್ಸ್ ನಲ್ಲಿ ಬಂದೂಕು ಇಟ್ಟುಕೊಂಡು ಶಾಲೆಗೆ ತೆರಳಿದ್ದಾನೆ,

ಬೆಳಿಗ್ಗೆ ತರಗತಿ ನಡೆದು ಮಧ್ಯದಲ್ಲಿ ವಿರಾಮ ಇದ್ದ ವೇಳೆ ತರಗತಿಯಿಂದ ಹೊರ ಬಂದ ವಿದ್ಯಾರ್ಥಿ ವರಾಂಡದಲ್ಲಿರುವ ಶಿಕ್ಷಕನನ್ನು ಕಂಡು ಕೂಡಲೇ ತರಗತಿಗೆ ಬಂದು ತನ್ನ ಟಿಫನ್ ಬಾಕ್ಸ್ ಒಳಗೆ ಇದ್ದ ಪಿಸ್ತೂಲ್ ಹಿಡಿದುಕೊಂಡು ತರಗತಿಯಿಂದ ಹೊರಬಂದು ಶಿಕ್ಷಕನ ಬೆನ್ನಿಗೆ ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿ ನಡೆದ ಕೂಡಲೇ ಕುಸಿದು ಬಿದ್ದ ಶಿಕ್ಷಕನನ್ನು ಅಲ್ಲಿದ್ದ ಇತರ ಶಿಕ್ಷಕರು ಸೇರಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಕ್ಷಕ ಅಪಾಯದಿಂದ ಪಾರಾಗಿರುವುದಾಗಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ವಿದ್ಯಾರ್ಥಿ ಬಂಧನ:
ಶಿಕ್ಷಕನ ಮೇಲೆ ಗುಂಡು ಹಾರಿಸಿದ ವಿದ್ಯಾರ್ಥಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು ಈ ವೇಳೆ ಅಲ್ಲಿದ್ದ ಇತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆತನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಅಪ್ರಾಪ್ತ ವಿದ್ಯಾರ್ಥಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 109 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

[pj-news-ticker]