ಬೆಳ್ತಂಗಡಿ: ಧರ್ಮಸ್ಥಳದ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತಂಡ ಶುಕ್ರವಾರ ಹೊಸ ಸ್ಥಳದಲ್ಲಿ ನಡೆಸಿದ ಶೋಧ ವಿಫಲವಾಗಿದೆ.
ಧರ್ಮಸ್ಥಳ ಗ್ರಾಮದ ಬೊಳಿಯಾರ್ ಗೋಂಕ್ರತಾರ್ ಸಮೀಪಕ್ಕೆ ಆ.8 ರಂದು ಅನಾಮಿಕ ದೂರುದಾರನೊಂದಿಗೆ ಎಸ್.ಐ.ಟಿ ತಂಡ ಕಾರ್ಯಾಚರಣೆಗೆ ಇಳಿದಿತ್ತು.
ಮಧ್ಯಾಹ್ನ 12 ಗಂಟೆಯಿಂದ 5.30 ರವರೆಗೆ ಶೋಧ ನಡೆಸಿದರೂ ಯಾವುದೇ ಕಳೇಬರದ ಸಾಕ್ಷಿ ದೊರೆತಿಲ್ಲ ಎಂದು ತಿಳಿದುಬಂದಿದೆ.
15 ನೇ ಸ್ಥಳದ ಕಾರ್ಯಾಚರಣೆ ಅಂತ್ಯಗೊಂಡಿದೆ. ಅನಾಮಿಕ ಈ ಹಿಂದೆ ಹೇಳಿದಂತೆ ಕಲ್ಲೇರಿಯಿಂದ ಸ್ವಲ್ಪ ದೂರದಲ್ಲಿ ಬಾಲಕಿಯೋರ್ವಳ ಶವವನ್ನು ಶಾಲಾ ಬ್ಯಾಗ್ ಸಮೇತ ಹೂತಿಡಲಾಗಿದೆ ಎಂಬ ದೂರಿನನ್ವಯ ಇಂದಿನ ಕಾರ್ಯಾಚರಣೆ ನಡೆಸಲಾಗಿದೆ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆದರೆ ಎಸ್.ಐ.ಟಿ. ಮೂಲ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
