ಲಂಡನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5ನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಭಾರತ 224 ರನ್ಗೆ ಆಲೌಟ್ ಆಗಿದೆ.
ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ಗೆ 204 ರನ್ ಗಳಿಸಿದ್ದ ಭಾರತ ಶುಕ್ರವಾರ ದ್ವಿತೀಯ ದಿನದಾಟದಲ್ಲಿ ಕೇವಲ 20 ರನ್ ಮಾತ್ರಗಳಿಸಿತು. ಪಂದ್ಯ ಆರಂಭಗೊಂಡು ಅರ್ಧ ಗಂಟೆ ಕಳೆಯುವ ಮುನ್ನವೇ ಸರ್ವಪತನ ಕಂಡಿತು.
52 ರನ್ ಸಿಡಿಸಿದ್ದ ಕರುಣ್ ನಾಯರ್ ಒಂದು ಬೌಂಡರಿ ಬಾರಿಸಿ 57 ರನ್ಗೆ ವಿಕೆಟ್ ಕಳೆದುಕೊಂಡರು. ವಾಷಿಂಗ್ಟನ್ ಸುಂದರ್ 26 ರನ್ ಗಳಿಸಿದರು. ಉಭಯ ಆಟಗಾರರ ವಿಕೆಟ್ ಬಿದ್ದೊಡನೆ ಭಾರತ ನಾಟಕೀಯ ಕುಸಿತ ಕಂಡಿತು. ಗಸ್ ಅಟ್ಕಿನ್ಸನ್ ಮಾರಕ ದಾಳಿಗೆ ಸಿರಾಜ್ ಮತ್ತು ಪ್ರಸಿದ್ಧ್ ಶೂನ್ಯ ಸುತ್ತಿದರು. ಅಟ್ಕಿನ್ಸನ್ 33 ರನ್ಗೆ 5 ವಿಕೆಟ್ ಕಿತ್ತು ಮಿಂಚಿದರು.
ಜೋಶ್ ಟಂಗ್ 3 ವಿಕೆಟ್ ಕಿತ್ತರು. ಗಾಯಗೊಂಡು ಕ್ರಿಸ್ ವೋಕ್ಸ್ ಹೊರಬಿದ್ದರೂ ಕೂಡ ಅಟ್ಕಿನ್ಸನ್ ಮತ್ತು ಟಂಗ್ ಸೇರಿಕೊಂಡು ತಂಡಕ್ಕೆ ಯಾವುದೇ ಕೊರತೆ ಬಾರದಂತೆ ನೋಡಿಕೊಂಡರು.
