Trending

ಬಸ್​ಗಳಲ್ಲಿ ಹೊಸ ಲಗೇಜ್​ ನಿಯಮ ಜಾರಿಗೆ ತಂದಿಲ್ಲ : ಕೆಎಸ್​ಆರ್​ಟಿಸಿ ಸ್ಪಷ್ಟನೆ

Spread the love

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನೂತನ ಲಗೇಜ್ ರೂಲ್ಸ್ ಜಾರಿ ಮಾಡಿದೆ ಎಂದು ಸಾಮಾಜಿಕ ಜಾಲತಾಣ ಮತ್ತು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸಂಬಂಧ ಕೆಎಸ್​ಆರ್​ಟಿಸಿ ಸ್ಪಷ್ಟೀಕರಣ ನೀಡಿದೆ.

ಸಾಮಾಜಿಕ‌ ಜಾಲತಾಣ ಮತ್ತು ಕೆಲವೊಂದು ಮಾಧ್ಯಮಗಳಲ್ಲಿ ಕೆಎಸ್​ಆರ್​ಟಿಸಿಯಲ್ಲಿ ನೂತನ ಲಗೇಜ್ ನಿಯಮ ಜಾರಿ ಎಂದು ಪ್ರಕಟವಾಗಿರುವುದು ಸತ್ಯಕ್ಕೆ ದೂರವಾಗಿರುತ್ತದೆ. ನಿಗಮ ಯಾವುದೇ ಹೊಸ ಲಗೆಜ್​ ನಿಯಮಗಳನ್ನು ಜಾರಿಗೆ ತಂದಿಲ್ಲ ಎಂದು ಹೇಳಿದೆ.

ಕೆಎಸ್​ಆರ್​ಟಿಸಿ ಸ್ಪಷ್ಟನೆ

“ನಿಗಮದ ಬಸ್ಸುಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಲಗೇಜ್ / ಸರಕುಗಳನ್ನು ಸಾಗಿಸಲು ಹಿಂದಿನಿಂದಲೂ ವ್ಯವಸ್ಥೆ ಜಾರಿಯಿದ್ದು, ಅಂದರೆ ವಾಷಿಂಗ್ ಮಷಿನ್, ಫ್ರಿಡ್ಜ್, ಟ್ರಕ್ ಟಯರ್, ಅಲ್ಯೂಮಿನಿಯಂ ಪೈಪ್, ಕಬ್ಬಿಣದ ಪೈಪ್, ಪಾತ್ರೆ, ಬೆಕ್ಕು, ನಾಯಿ, ಮೊಲಗಳನ್ನು ಸಾಗಿಸಲು ಅವಕಾಶಗಳನ್ನು ದಿನಾಂಕ 05-11-1999 ರಿಂದಲೇ (ಬಸ್ಸಿನಲ್ಲಿ‌ರುವ ಸ್ಥಳಾವಕಾಶಕ್ಕೆ ಅನುಗುಣವಾಗಿ) ನಿಗಮದಲ್ಲಿ ಜಾರಿಯಲ್ಲಿರುತ್ತದೆ.”

“ಈ ವ್ಯವಸ್ಥೆಯ ಅನುಷ್ಠಾನದಲ್ಲಿ ಕಾಲದಿಂದ ಕಾಲಕ್ಕೆ ದರಗಳ ಪರಿಷ್ಕರಣೆ, 30 ಕೆಜಿ ವರೆಗೆ ಲಗೇಜ್ ಕೊಂಡೊಯ್ಯಲು ಉಚಿತ ಅವಕಾಶ, ಸಾಗಿಸಬಹುದಾದ ವಸ್ತುಗಳ ಪ್ರಯಾಣ ಇತ್ಯಾದಿಗಳನ್ನು ಉಲ್ಲೇಖಿಸಿ ಪ್ರಸ್ತುತ ದಿನಾಂಕ: 28-10-2022 ರಿಂದ ಲಗೇಜ್ ನಿಯಮ / ಸುತ್ತೋಲೆ ಜಾರಿಯಲ್ಲಿರುತ್ತದೆ.”

“ದಿನಾಂಕ: 28-10-2022 ರ ನಂತರ ಇತ್ತೀಚೆಗೆ ಯಾವುದೇ ಹೊಸ ಲಗೇಜ್ ನಿಯಮ / ಸುತ್ತೋಲೆಯನ್ನು ನಿಗಮದಲ್ಲಿ ಜಾರಿಗೆ ತಂದಿರುವುದಿಲ್ಲ ಎಂಬುದನ್ನು ತಮ್ಮ ಆದ್ಯ ಗಮನಕ್ಕೆ ತರಲಾಗಿದೆ” ಎಂದು ಪತ್ರಿಕಾ ಪ್ರಕರಟಣೆಯಲ್ಲಿ ತಿಳಿಸಿದೆ.

ಏನಿದು ನಿಯಮ ವಿವಾದ

ಕೆಎಸ್​ಆರ್​ಟಿಸಿ ಬಸ್​​ನಲ್ಲಿ 30 ಕೆಜಿಯವರೆಗೂ ಪ್ರಯಾಣಿಕರು ಉಚಿತವಾಗಿ ಲಗೇಜು ಉಚಿತವಾಗಿ ತೆಗೆದುಕೊಂಡು ಹೋಗಬಹುದಾಗಿದೆ. 30 ಕೆಜಿ ಮೇಲೆ ಲಗೇಜ್ ಇದ್ದರೆ ಹಣ ಪಾವತಿ ಮಾಡಬೇಕಿದೆ. 40 ಕೆಜಿ ತೂಕವಿರುವ ವಾಷಿಂಗ್ ಮಿಷಿನ್, ಫ್ರಿಡ್ಜ್, 25 ಕೆಜಿ ತೂಕದ ಖಾಲಿ ಕಂಟೈನರ್ ಬಸ್​​ನಲ್ಲಿ ಸಾಗಿಸಲೂ ಅವಕಾಶ ನೀಡಲಾಗಿದೆ ಎಂದು ವರದಿಯಾಗಿತ್ತು.

ಕಬ್ಬಿಣ ಪೈಪ್ ಮೋಟಾರ್​ಗಳನ್ನೂ ಸಾಗಿಸಬಹುದು. ಮೊಲ, ನಾಯಿ ಮರಿ, ಬೆಕ್ಕು, ಪಕ್ಷಿಯನ್ನೂ ಸಾಗಿಸಬಹದು. ನಾಯಿಯನ್ನು ಸಾಗಿಸಬಹುದು. ನಾಯಿಯನ್ನು ಚೈನ್​ನಲ್ಲಿ ಬಿಗಿದು ಕಾಳಜಿಯೊಂದಿಗೆ ಬಸ್​​ನಲ್ಲಿ ಸಾಗಿಸಬಹುದು ಎಂದು ವರದಿಯಾಗಿತ್ತು. ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಕೆಎಸ್​ಆರ್​ಟಿಸಿ ಹೇಳಿದ್ದು, ಸ್ಪಷ್ಟೀಕರಣ ನೀಡಿದೆ.

[pj-news-ticker]