ನವದೆಹಲಿ: ಚಿನಿವಾರ ಪೇಟೆಯಲ್ಲಿ ಮಂಗಳವಾರ ಮತ್ತೆ ಚಿನ್ನ, ಬೆಳ್ಳಿ ಬೆಲೆ ಏರಿಕೆಯಾಗಿದೆ. ಶುದ್ಧ ಚಿನ್ನದ ದರ ₹1 ಸಾವಿರ ಏರಿಕೆಯಾಗಿದ್ದು, 10 ಗ್ರಾಂ ಬೆಲೆ ₹1,00,020ಗೆ ತಲುಪಿದೆ. ಸೋಮವಾರ 10 ಗ್ರಾಂ ಚಿನ್ನದ ಬೆಲೆ ₹99,020 ಇತ್ತು.
ಇದೇ ರೀತಿ ಆಭರಣ ಚಿನ್ನದ ದರ ಕೂಡ ₹1 ಸಾವಿರ ಏರಿಕೆಯಾಗಿ, 10 ಗ್ರಾಂಗೆ ₹99,550 ಆಗಿದೆ. ಸೋಮವಾರ 10 ಗ್ರಾಂಗೆ ₹98,550 ಇತ್ತು.
ಚಿನ್ನದಂತೆಯೇ ಬೆಳ್ಳಿ ಬೆಲೆಯೂ ಏಕಾಏಕಿ ₹3 ಸಾವಿರ ಏರಿಕೆಯಾಗಿದ್ದು, ಕೆ.ಜಿ ಬೆಳ್ಳಿ ಬೆಲೆ ₹1,14,000ಕ್ಕೆ ತಲುಪಿದೆ. ಸೋಮವಾರ ಬೆಳ್ಳಿ ಬೆಲೆ ಕೆ.ಜಿಗೆ ₹1,11,000 ಇತ್ತು.
ಮಾರುಕಟ್ಟೆಯಲ್ಲಿ ಖರೀದಿ ಹೆಚ್ಚಳವಾಗಿದ್ದೇ ದರ ಏರಿಕೆಗೆ ಕಾರಣ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ಹೇಳಿದೆ.
