Trending

ಇಂದಿನಿಂದ ಅನ್ನಭಾಗ್ಯ ಆಹಾರ ಧಾನ್ಯ ಸಾಗಾಣಿಕೆ ಬಂದ್ : ಪಡಿತರ ವಿತರಣೆಯಲ್ಲಿ ವ್ಯತ್ಯಯ!

Spread the love

ಬೆಂಗಳೂರು : ನಾಲ್ಕು ತಿಂಗಳಿಂದ ರಾಜ್ಯ ಸರ್ಕಾರ ಪಡಿತರ ಆಹಾರ ಧಾನ್ಯ ಸಾಗಣಿಕೆ ವೆಚ್ಚ ನೀಡಿಲ್ಲ. 250 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಲಾರಿ ಮಾಲೀಕರು, ಚಾಲಕರು ಮುಷ್ಕರಕ್ಕೆ  ಕರೆ ನೀಡಿದ್ದಾರೆ. ಆ ಮೂಲಕ ಈ ತಿಂಗಳ ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಈ ಬಗ್ಗೆ ಮಾತನಾಡಿರುವ ರಾಜ್ಯ ಲಾರಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ವಿ‌.ಆರ್.ಷಣ್ಮುಗಪ್ಪ, ಇಂದಿನಿಂದ ಅನ್ನಭಾಗ್ಯ ಆಹಾರ ಧಾನ್ಯ ಸಾಗಾಣಿಕೆ ಬಂದ್ ಎಂದು ಮಾಹಿತಿ ನೀಡಿದ್ದಾರೆ.

ನಮ್ಮ ಖಾತೆಗೆ ಹಣ ಬರುವವರೆಗೂ ಮುಷ್ಕರ ಹಿಂಪಡೆಯಲ್ಲ: ವಿ‌.ಆರ್.ಷಣ್ಮುಗಪ್ಪ

ಈ ಕುರಿತು ಮಾಹಿತಿ ನೀಡಿರುವ ವಿ‌.ಆರ್.ಷಣ್ಮುಗಪ್ಪ, ಯಾವುದೇ ಭರವಸೆ ಈಡೇರಿಸದ ಹಿನ್ನೆಲೆ ಇಂದಿನಿಂದ ಅನ್ನಭಾಗ್ಯ ಆಹಾರ ಧಾನ್ಯ ಸಾಗಾಣಿಕೆ ಬಂದ್​ ಎಂದಿದ್ದಾರೆ. ನಮ್ಮ ಖಾತೆಗೆ ಹಣ ಬರುವವರೆಗೂ ಮುಷ್ಕರ ಹಿಂಪಡೆಯಲ್ಲ ಎಂದು ಹೇಳಿದ್ದಾರೆ.

5 ತಿಂಗಳಿನಿಂದ 260 ಕೋಟಿ ರೂ. ಬಿಡುಗಡೆ ಆಗಬೇಕು. ಜೂ.19ರಂದು 100 ಕೋಟಿ ರೂ. ಹಾಕುವುದಾಗಿ ಹೇಳಿದ್ದರು. ಆದರೆ ಈವರೆಗೂ 1 ರೂ. ಹಣ ಬಂದಿಲ್ಲ ನಮ್ಮ ಖಾತೆಗೆ. ಆಹಾರ ಸಚಿವರು, ಅಧಿಕಾರಿಗಳು ಮಾತುಕತೆಗೆ ಕರೆದಿಲ್ಲ, ಹಾಗಾಗಿ ಇಂದಿನಿಂದ ಮುಷ್ಕರ ಮಾಡಲು ಮುಂದಾಗಿದ್ದೇವೆ. ಹಣ ಬಂದ ಮೇಲೆ ನಾವು ಅಕ್ಕಿ ಸರಬರಾಜು ಮಾಡಲು ಮುಂದಾಗುತ್ತೇವೆ ಎಂದಿದ್ದಾರೆ.

[pj-news-ticker]