Trending

ಹನಿಮೂನ್ ಮರ್ಡರ್ ಕೇಸ್ : ರಾಜಾ ರಘುವಂಶಿ ಹತ್ಯೆಗೆ ಬಳಸಿದ್ದ ಮಾರಕಾಸ್ತ್ರ ಪತ್ತೆ!

Spread the love

ಶಿಲ್ಲಾಂಗ್‌: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಇಂದೋರ್‌ ಮೂಲದ ರಾಜಾ ರಘುವಂಶಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಿಯೊಂದು ಲಭಿಸಿದೆ. ರಾಜಾ ಹತ್ಯೆಗೆ ಆತನ ಪತ್ನಿ ಸೋನಂ ನೇಮಿಸಿದ್ದ ಹಂತಕರು ಬಳಸಿದ್ದ ಮಾರಕಾಸ್ತ್ರ ಪತ್ತೆಯಾಗಿದೆ. ಇದೇ ಕತ್ತಿಯಿಂದಲೇ ರಘುವಂಶಿಯ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆ ಅವರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಗಳು ಬಲವಾಗಿ ಚುಚ್ಚಿದ್ದಾರೆ ಎನ್ನಲಾಗಿದೆ.

ಇನ್ನು ಬಂಧಿತ ಆರೋಪಿ ವಿಶಾಲ್‌ ಚೌಹಾಣ್‌ ಮಾರಕಾಸ್ತ್ರದಿಂದ ರಘುವಂಶಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಚಾಕುವನ್ನು ಆರೋಪಿಗಳು ಗುವಾಹಟಿಯ ರೈಲ್ವೆ ನಿಲ್ದಾಣದ ಬಳಿ ಖರೀದಿಸಿದ್ದಾರೆ ಎಂದು ತನಿಖೆಯಲ್ಲಿ ಹೊರಬಂದಿದೆ. ಇನ್ನೊಬ್ಬ ಆರೋಪಿ ಆಕಾಶ್‌ ಟೀ ಶರ್ಟ್‌ನಲ್ಲಿ ರಘುವಂಶಿಯ ರಕ್ತದ ಕಲೆಗಳು ಕಂಡುಬಂದಿವೆ ಎಂದು ಪೋಲಿಸರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ರಘುವಂಶಿಯ ತಲೆಯ ಹಿಂದೆ ಮುಂದೆ ಎರಡೂ ಕಡೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸದ್ಯದ ಮಾಹಿತಿಯ ಪ್ರಕಾರ, ಈ ಹತ್ಯೆ ಮಾಡಲು ಅರೋಪಿಗಳು ಮದುವೆಗೂ ಮುಂಚೆಯೇ ಪ್ಲ್ಯಾನ್‌ ಮಾಡಿದ್ದರು ಎನ್ನಲಾಗಿದೆ. ಸೋನಂ ಮತ್ತುಅವಳ ಪ್ರಿಯಕರ ರಾಜ್ ಕುಶ್ವಾಹಾ ಸೇರಿ ಈ ಹತ್ಯೆಯ ಸಂಚು ರೂಪಿಸಿದ್ದರು. ಸೋನಂ ವಿವಾಹವಾದ ನಂತರವೂ ರಾಜ್‌ ಜೊತೆಗೆ ಕಾಮಾಖ್ಯಾ ದೇವಾಲಯಕ್ಕೆ ಭೇಟಿ ನೀಡಿದ್ದಳು. ನಂತರ ಆರೋಪಿಗಳು ಗುವಾಹಟಿಗೆ ಬಂದಿದ್ದು,ಗುವಾಹಟಿಯಲ್ಲಿಯೇ ಹತ್ಯೆ ನಡೆಸುವ ಪ್ಲ್ಯಾನ್‌ ಮಾಡಿದ್ದಾರೆ. ನಂತರ ಕೆಲವು ಕಾರಣಗಳಿಂದ ಶಿಲ್ಲಾಂಗ್‌ನಲ್ಲಿ ರಾಜಾನನ್ನು ಹತ್ಯೆ ಮಾಡುವ ಬಗ್ಗೆ ಪ್ಲ್ಯಾನ್‌ ಮಾಡಲಾಗಿತ್ತು.

ಕಾಶಿ ಹಿಲ್ಸ್ ಜಿಲ್ಲೆಯ ಎಸ್‌ಪಿ ವಿವೇಕ್ ಸೈಯಂ ಮಾತನಾಡಿ, ಇಂದೋರ್‌ನಲ್ಲಿ ಫೆಬ್ರವರಿಯಲ್ಲಿಯೇ ಈ ಸಂಚು ರೂಪಿಸಲಾಗಿದೆ. ಈ ಹತ್ಯೆಗೆ 2 ಬ್ಯಾಕಪ್‌ ಪ್ಲಾನ್‌ ಮಾಡಿದ್ದು, ಒಂದು ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ನಂಬಿಸುವುದು, ಇನ್ನೊಂದು ಯಾವುದೋ ಮಹಿಳೆಯನ್ನು ಕೊಂದು ಬೆಂಕಿ ಹಚ್ಚಿ, ಅದು ಸೋನಂ ಎಂದು ನಂಬಿಸಲು ಪ್ರಯತ್ನ ಪಟ್ಟಿದ್ದು, ಯಾವುದೇ ಪ್ಲ್ಯಾನ್‌ ಸಕ್ಸಸ್‌ ಆಗಿಲ್ಲ.

[pj-news-ticker]